ದ್ವಿಚಕ್ರ ವಾಹನಗಳ ಢಿಕ್ಕಿ: ಇಬ್ಬರಿಗೆ ಗಾಯ

ದ್ವಿಚಕ್ರ ವಾಹನಗಳ ಢಿಕ್ಕಿ: ಇಬ್ಬರಿಗೆ ಗಾಯ

ಉಜಿರೆ: ದ್ವಿಚಕ್ರ ವಾಹನಗಳು ಪರಸ್ಪರ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ನಾರಾವಿ-ಗುರುವಾಯನಕೆರೆ ಹೆದ್ದಾರಿಯ ಬಡಗಕಾರಂದೂರು ಗ್ರಾಮದ ಅಳದಂಗಡಿ ಎಂಬಲ್ಲಿ ಸಮೀಕ್ಷಾ ಎಂಬವರು ಅನುಕ್ಷಾ ಸಹ ಸವಾರೆ ಜತೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಇಂಡಿಕೇಟರ್ ಹಾಕಿ ಬಲಬದಿಗೆ ತಿರುಗಿಸುತ್ತಿದ್ದ ವೇಳೆ ಮುಂಭಾಗದಿಂದ ಶ್ರವಣ್ ಶೆಟ್ಟಿ ಎಂಬಾತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಈ ವೇಳೆ ಸಮೀಕ್ಷಾ ಮತ್ತು ಅನುಕ್ಷಾ ರಸ್ತೆಗೆ ಬಿದ್ದ ಪರಿಣಾಮ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಡುಕುತನದಿಂದ ವಾಹನ ಚಲಾಯಿಸಿದ ಶ್ರವಣ್ ಶೆಟ್ಟಿ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article