
ಸರಕಾರ ತೆರೆದ ಪಾಳು ಬಾವಿಗೆ ಬಿದ್ದ ಹೋರಿ
Sunday, October 27, 2024
ಉಳ್ಳಾಲ: ಆವರಣ ಗೋಡೆಯಿಲ್ಲದೆ ಪಾಳು ಬಿದ್ದಿರುವ ಸರಕಾರಿ ಬಾವಿಯೊಂದಕ್ಕೆ ಬೀಡಾಡಿ ಹೋರಿಯೊಂದು ಬಿದ್ದು ನೀರಲ್ಲಿ ಒದ್ದಾಡಿದ್ದು, ಘಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನು ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು, ಪಲ್ಲ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಶನಿವಾರ ಸಂಜೆ ಬಾವಿಯ ಬಳಿಯಲ್ಲಿ ಬೀಡಾಡಿ ಹೋರಿಗಳೆರಡು ಗುದ್ದಾಡಿಕೊಂಡಿದ್ದು ಪರಿಣಾಮ ಒಂದು ಹೋರಿಯು ಬಾವಿಯೊಳಗೆ ಬಿದ್ದಿದೆ. ಸ್ಥಳೀಯರೊಬ್ಬರು ಬಾವಿಯ ನೀರಲ್ಲಿ ಹೋರಿ ಒದ್ದಾಡುತ್ತಿದ್ದುದನ್ನು ಕಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.