.jpeg)
ಅಮ್ಮೆಮಾರ್ ಇಬ್ಬರ ಕೊಲೆಯತ್ನ ಪ್ರಕರಣ: 8 ಮಂದಿಯ ಬಂಧನ
ಬಂಟ್ವಾಳ: ಪುದು ಗ್ರಾಮದ ಅಮ್ಮೆಮಾರ್ ಎಂಬಲ್ಲಿ ಪೂರ್ವದ್ಚೇಷದ ಹಿನ್ನೆಲೆಯಲ್ಲಿ 14 ಮಂದಿಯ ಯುವಕರ ತಂಡವೊಂದು ಮಾರಕಾಸ್ತ್ರದಿಂದ ದಾಳಿಗೈದು ಇಬ್ಬರ ಕೊಲೆಗೆಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಹಿತ 8 ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮನ್ಸೂರ್ ಯಾನೆ ಮಂಚು (35), ಪುದು ಗ್ರಾಮದ ಕುಂಪನಮಜಲು ಜುವೇರಿಯಾ ಆಂಗ್ಲ ಮಾದ್ಯಮ ಶಾಲಾ ಬಳಿ ನಿವಾಸಿ ಮಿಚ್ಚ ಯಾನೆ ಮಿಸ್ತಕ್ (30), ಪುದು ಗ್ರಾಮದ ಅಮ್ಮೆಮಾರ್ ರಾತಿಬ್ ಕೊಟ್ಟಿಗೆ ನಿವಾಸಿ ಸರ್ಫುದ್ದೀನ್ ಯಾನೆ ತಾಟು (28), ಪುದುಗ್ರಾಮದ ಅಮ್ಮೆಮಾರ್ ರಾತಿಬ್ ಕೊಟ್ಟಿಗೆ ನಿವಾಸಿ ರಿಜ್ವಾನ್ ಯಾನೆ ರಿಜ್ಜು (30), ಪುದುಗ್ರಾಮದ ಅಮ್ಮೆಮಾರ್ ರಾತಿಬ್ ಕೊಟ್ಟಿಗೆ ನಿವಾಸಿ ಅದ್ನಾನ್ ಯಾನೆ ಅದ್ದು (24), ಅಮ್ಮೆಮಾರ್ ನಿವಾಸಿ ಸುಹೈಲ್ ಯಾನೆ ಚೋಯಿ (25), ಅಮ್ಮೆಮಾರ್ ನಿವಾಸಿ ಜಾಹಿದ್ (26), ಅಮ್ಮೆಮಾರ್ ನಿವಾಸಿ ಸಾದಿಕ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಕೃತ್ಯಕ್ಕೆ ಬಳಸಿದ ಎರಡು ವಾಹನ, ತಲವಾರು, ಮೊಬೈಲನ್ನು ಆರೋಪಿಗಳಿಂದ ವಶಪಡಿಸಿದ್ದಾರೆ.ಉಳಿದಂತೆ ಆರು ಮಂದಿ ಆರೋಪಿಗಳು ತಲೆಮರೆಸಿದ್ದು, ಶೋಧಕಾರ್ಯ ಮುಂದುವರಿದಿದೆ. ಎಸ್ಪಿ ಯತೀಶ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಡಿವೈಎಸ್‌ಇ ವಿಜಯಪ್ರಸಾದ್ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಇನ್ಸ್‌ಪೆಕ್ಟರ್ ಶಿವಕುಮಾರ್, ಎಸ್‌ಐ ಹರೀಶ್ ಮತ್ತವರ ತಂಡ ವಿವಿದೆಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನುನ್ಯಾಯಾಲಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂದನ ವಿಧಿಸಲಾಗಿದೆ.
ಎರಡು ವಾರದ ಹಿಂದೆ ಮಧ್ಯೆರಾತ್ರಿ ಅಮ್ಮೆಮಾರ್ ಶಾಲಾ ಬಳಿಅಮ್ಮೆಮಾರ್ ನಿವಾಸಿಗಳಾದ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್ ಎಂಬವರ ಮೇಲೆ 14 ಮಂದಿ ಯುವಕರ ತಂಡ ದಾಳಿ ನಡೆಸಿ ತಲವಾರು ಹಾಗೂ ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿತ್ತು.
ಪ್ರಮುಖ ಆರೋಪಿ ಮನ್ಸೂರ್ ಹಾಗೂ ಗಾಯಾಳುವಿನ ಪೈಕಿ ತಸ್ಲೀಂ ಈ ಹಿಂದೆ ಫರಂಗಿಪೇಟೆಯಲ್ಲಿನಡೆದ ಡಬ್ಬಲ್ ಮರ್ಡರ್ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ಗೋಸಾಗಾಟದಂಧೆ ಸಹಿತ ವ್ಯವಹಾರದ ವಿಚಾರದಲ್ಲಿ ಇವರೊಳಗೆ ವೈಷಮ್ಯ ಉಂಟಾಗಿದ್ದು, ಇದೇ ಕಾರಣಕ್ಕೆ ಆರೋಪಿ ಮನ್ಸೂರು ತನ್ನ ಸಹಚರರೊಂದಿಗೆ ಸೇರಿ ತಸ್ಲೀಂನ ಕೊಲೆಗೆ ಯತ್ನಿಸಿದ್ದಾರೆಂದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.