
ನಯನರಮ್ಯ ಧರ್ಮಸ್ಥಳ ಲಕ್ಷದೀಪೋತ್ಸದಲ್ಲಿ ಸನಾತನ ಸಂಸ್ಥೆಯ ಸಹಭಾಗ: ಡಾ. ಡಿ. ವೀರೇಂದ್ರ ಹೆಗ್ಗಡೆ ಇವರ ಶುಭಹಸ್ತದಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ!
Wednesday, November 27, 2024
ಬೆಳ್ತಂಗಡಿ: ಎಂಟು ಶತಮಾನಗಳ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ. ಈ ಕ್ಷೇತ್ರದಲ್ಲಿ ನ.26 ರಿಂದ 30 ರ ವರೆಗೆ ಲಕ್ಷದೀಪೋತ್ಸವವು ನಡೆಐಊರ್ಥಥೀರ್ಧಧೂ, ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮದ ನಿಮಿತ್ತ ನ.26 ರಂದು ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಗ್ರಂಥ ಪ್ರದರ್ಶಣಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರರಿಂದ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿದರು.
ಈ ಪ್ರದರ್ಶನದಲ್ಲಿ ಅಧ್ಯಾತ್ಮ, ಹಬ್ಬಗಳ ಆಚರಣೆಯ ಶಾಸ್ತ್ರ, ಹಿಂದೂ ಧರ್ಮದಲ್ಲಿ ಹೇಳಿದ ಜೀವನ ಶೈಲಿಯ ಶಾಸ್ತ್ರ ಈ ರೀತಿ ಮಾನವ ಕುಲಕ್ಕೆ ಉಪಯುಕ್ತ ಅಮೂಲ್ಯ ಗ್ರಂಥ ಸಂಪತ್ತು ಇದೆ, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರಿಗೂ ಈ ಗ್ರಂಥಗಳಲ್ಲಿನ ಜ್ಞಾನ ಅತ್ಯಾವಶ್ಯಕ ಆಗಿವೆ. ಅಷ್ಟೆ ಅಲ್ಲದೆ ಈ ಪ್ರದರ್ಶನದಲ್ಲಿ ಸುಗಂಧ ಭರಿತ ವಿವಿಧ ಊದುಬತ್ತಿಗಳು, ಸುಗಂಧಭರಿತ ಸಾಬೂನು, ಉಟನೆ, ಶುದ್ಧ ಅರಿಷಿಣದಿಂದ ತಯಾರಿಸಿದ ಕುಂಕುಮ, ದೇವತೆಗಳ ಸಾತ್ವಿಕ ಭಾವ ಚಿತ್ರಗಳು, ಪಂಚಾಂಗ, ಸೇರಿದಂತೆ ಅನೇಕ ಉತ್ಪಾದನೆಗಳು ಲಭ್ಯವಿದ್ದು ಭಕ್ತರು ತಪ್ಪದೆ ಇಲ್ಲಿ ಭೇಟಿ ನೀಡಬೇಕೆಂದು ಸನಾತನ ಸಂಸ್ಥೆ ಕರೆ ನೀಡಿದೆ.
ಈ ಪ್ರದರ್ಶನವು 55ನೇ ಮಳಿಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಉಜಿರೆಯಲ್ಲಿ ನ.26 ರಿಂದ 30 ವರೆಗೆ ಎಲ್ಲರಿಗಾಗಿ ಉಪಲಬ್ಧವಿದೆ.