ಡಿ. 1ರಂದು ಪಿಲಿಕುಳದಲ್ಲಿ ಜಿಲ್ಲಾ ಯುವಜನೋತ್ಸವ

ಡಿ. 1ರಂದು ಪಿಲಿಕುಳದಲ್ಲಿ ಜಿಲ್ಲಾ ಯುವಜನೋತ್ಸವ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಸಸಿಹಿತ್ಲು  ಹಳೇ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಹಾಗೂ ವಿಜ್ಞಾನ ಮೇಳ ಸ್ಪರ್ಧೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ  ಡಿ. 1ರಂದು ನಡೆಯಲಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವಕೇಂದ್ರ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಯುವಜನ ಒಕ್ಕೂಟ, ಸಸಿಹಿತ್ಲು ಯುವಕ-ಯುವತಿ ಮಂಡಲ ಸಂಯುಕ್ತಾಶ್ರಯದಲ್ಲಿ ಯವಜನೋತ್ಸವ ನಡೆಯಲಿದೆ. ಡಿ. 1ರಂದು ಬೆಳಗ್ಗೆ 9ಕ್ಕೆ ಸಸಿಹಿತ್ಲು  ಹಳೇ ವಿದ್ಯಾರ್ಥಿ ಸಂಘದ ರಂಗಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ದ.ಕ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಷಯಾಧಾರಿತ ಸ್ಪರ್ಧೆ, ಜನಪದ ನೃತ್ಯ, ಜನಪದ ಗೀತೆ, ಕವಿತೆ ಬರೆಯುವುದು, ಕಥೆ ಬರೆಯುವುದು, ಚಿತ್ರಕಲೆ, ಘೋಷಣೆ, ಕರಕುಶಲ ಕಲೆ, ಕೃಷಿ ಉತ್ಪನ್ನ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಯುವಜನೋತ್ಸವದಲ್ಲಿ 15-29 ವರ್ಷದೊಳಗಿನವರು ಭಾಗವಹಿಸಬಹುದು, ಸ್ಪರ್ಧಿಗಳು ದ.ಕ. ಜಿಲ್ಲೆಯವರಾಗಿರಬೇಕು, ವಯಸ್ಸಿನ ದೃಢೀಕರಣ ಪತ್ರವಿರಬೇಕು, ಸ್ಪರ್ಧೆಗೆ ಬೇಕಾದ ಪರಿಕರ ಸ್ಪರ್ಧಿಗಳೇ ತರಬೇಕು, ಚಲನಚಿತ್ರ ಗೀತೆಗಳಿಗೆ ಅವಕಾಶವಿಲ್ಲ, ಕ್ಯಾಸೆಟ್ ಆಡಿಯೋ ರೆಕಾರ್ಡರ್ಗಳನ್ನು ಬಳಸುವಂತಿಲ್ಲ. ಜಾನಪದ ನೃತ್ಯ, ಗೀತೆ ವಿಭಾಗದಲ್ಲಿ  ಪೂರ್ತಿ ಜನಪದ ಪ್ರಕಾರವಿರಬೇಕು, ಯುವಕ-ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆಯಿಲ್ಲ, ರಾಷ್ಟ್ರಮ್ಟದ ಯುವಜನೋತ್ಸವದಲ್ಲಿ 3 ಬಾರಿ ಭಾಗವಹಿಸಿದ ಅಥವಾ ಒಂದು ಬಾರಿ ಪದಕ ವಿಜೇತ ಸ್ಪರ್ಧಿಗಳು ಭಾಗವಹಿಸುವಂತಿಲ್ಲ ಎಂದರು.

ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟಕ್ಕೆ ಅರ್ಹರಾಗಿರುತ್ತಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.27ರಂದು ಸಂಜೆ 5.30ರೊಳಗೆ ZbqsoobhಃqsZeಟಟ.ಟಞ ಗೆ ಇಮೇಲ್ ಸಲ್ಲಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ನ.೧ರಂದು ಬೆಳಗ್ಗೆ 8ಗಂಟೆಗೆ ಸಸಿಹಿತ್ಲು ಸಂಘದ ರಂಗಮಂದಿರದಲ್ಲಿ ಮತ್ತು ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸುವವರು ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ   ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ನೆಹರು ಯುವ ಕೇಂದ್ರದ ಅಧಿಕಾರಿ ಜಗದೀಶ್, ಕ್ರೀಡಾ ಇಲಾಖೆ ಅಧೀಕ್ಷಕ ಮಂಜುನಾಥ್, ದಿಲೀಪ್ ಕರ್ಕೇರ, ಅಮಿತ್ ಕುಮಾರ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article