ಶಕ್ತಿ ಫೆಸ್ಟ್-2024ರ ಸಮಾರೋಪ ಸಮಾರಂಭ

ಶಕ್ತಿ ಫೆಸ್ಟ್-2024ರ ಸಮಾರೋಪ ಸಮಾರಂಭ


ಮಂಗಳೂರು: ‘ಶಕ್ತಿ ಫೆಸ್ಟ್-2024’ ನ.16 ರಂದು ಶಕ್ತಿ ಪ.ಪೂ. ಕಾಲೇಜಿನಲ್ಲಿ ಆಯೋಜಿಸಲಾಯಿತು. ಒಂದು ದಿನ ನಡೆಸಲಾದ ಈ ಫೆಸ್ಟ್‌ನಲ್ಲಿ ಕಾಲೇಜು ಮತ್ತು ಶಾಲಾ ಹಂತದಲ್ಲಿ ಏಳು ವಿಭಾಗದಲ್ಲಿ ಸ್ಪರ್ಧೆಗಳನ್ನು ನಡೆಸಲಾಗಿತ್ತು. ಶಕ್ತಿ ಕಾಲೇಜಿನ ರೇಷ್ಮಾ ಮೆಮೊರಿಯಲ್ ಸಭಾಂಗಣದಲ್ಲಿ ನಡೆದ ಸಮಾರೋಪ ಸಭೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರನ್ನು ನಗದು ಬಹುಮಾನ, ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು. 

ಪ್ರೋಡಕ್ಟ್ ಲಾಂಚ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ರಿಕಾ ಮನೋಜ್ ಹಾಗೂ ಸಮನ್ವಿ ಶೆಟ್ಟಿ(ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜ್), ದ್ವಿತೀಯ ಬಹುಮಾನ ಅಶ್ವಿನಿ ಹಾಗೂ ಅಪೇಕ್ಷ ಜಿ. ರಾವ್(ಮದುಸೂದನ ಕುಶೆ ಪದವಿ ಪೂರ್ವ ಕಾಲೇಜು) ಅವರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಹೂಗುಚ್ಚ ಜೋಡಣೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಅನಿಷ್ಕ ಹಾಗೂ ಅಶಿಲ್(ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜಿನ), ದ್ವಿತೀಯ ಬಹುಮಾನವನ್ನು ದಿಯಾಶೆಟ್ಟಿ ಹಾಗೂ ಸ್ತುತಿ ಎಸ್.( ಕೆನರಾ ವಿಕಾಸ ಪದವಿಪೂರ್ವ ಕಾಲೇಜ್) ಪಡೆದುಕೊಂಡರು. 

ಫೇಸ್ ಪೈಂಟಿಂಗ್ (ಮುಖವರ್ಣಿಕೆ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ವರ್ಣಿತ ಕಾಮತ್ ಹಾಗೂ ಕೀರ್ತಿ ಎಸ್.ಶೆಟ್ಟಿ (ವಿಜಯ ಪದವಿಪೂರ್ವ ಕಾಲೇಜ್) ಹಾಗೂ ದ್ವಿತೀಯ ಬಹುಮಾನವನ್ನು ಸುಹಾನಿ ಹಾಗೂ ದಿಶಾ (ಶ್ರೀ ರಾಮಶ್ರಮ ಪದವಿಪೂರ್ವ ಕಾಲೇಜ್) ಪಡೆದುಕೊಂಡರು. 

ವೆರೈಟಿ (ವೈವಿಧ್ಯಮಯ) ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಂತ ಅಲೋಶಿಯಸ್‌ನ ವಿದ್ಯಾರ್ಥಿಗಳ ಗುಂಪು, ದ್ವಿತೀಯ ಬಹುಮಾನವು ಸೈಂಟ್ ಆಗ್ನೆಸ್‌ನ ವಿದ್ಯಾರ್ಥಿಗಳ ಗುಂಪು ಪಡೆದುಕೊಂಡಿತು. 

ಅದೇ ರೀತಿ ಫೆಸ್ಟ್‌ನ ನಿಮಿತ್ತ ಶಾಲಾ ಹಂತದಲ್ಲಿ ಅನೇಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಅವುಗಳ ವಿವರ ಈ ಕೆಳಗಿನಂತಿದೆ. ಟ್ರೆಶರ್ ಹಂಟ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನೈಶಾ ಶೆಟ್ಟಿ, ತಶ್ವಿ ಶೆಟ್ಟಿ ಕೃತ್ಯ ಜೈನ್, ಕೃತ್ ಕಾವ್ಯಾ(ಕ್ಯಾಂಬ್ರಿಡ್ಜ್ ಶಾಲೆ) ಹಾಗೂ ದ್ವಿತೀಯ ಬಹುಮಾನವನ್ನು ಶಿವಾನಂದ, ಆಕಾಶ್, ಅಕ್ಷತ, ಮೇಘನ (ಸರಕಾರಿ ಪ್ರೌಢಶಾಲಾ ನಾಲ್ಯಪದವು) ಪಡೆದುಕೊಂಡರು. 

ಏಕವ್ಯಕ್ತಿ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ನಿನಾದ ಕೆ. (ಶಾರಾದಾ ಸಿಬಿಎಸ್‌ಇ ಶಾಲೆ) ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ನಿಶಿಕಾ (ಪದುವ ಪ್ರೌಢ ಶಾಲೆ) ಪಡೆದುಕೊಂಡರು. 

ವಿಜ್ಞಾನ ಮೊಡೆಲ್ ಸ್ಪರ್ಧೆಯಲ್ಲಿ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತೇಜಸ್ ಪಿ. (ಶಕ್ತಿ ರೆಸಿಡೆನ್ಯಿಯಲ್ ಶಾಲೆ) ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಪೂರ್ಣ ಹೆರಾಲೆ, ಪ್ರಾಚಿ ಶೆಟ್ಟಿ, ಪ್ರಥ್ವಿರಾಜ್, ಶೌರ್ಯ ಪಿ.ಎ., (ಕ್ಯಾಂಬ್ರಿಡ್ಜ್ ಪ್ರೌಢಶಾಲೆ) ಪಡೆದುಕೊಂಡರು.

ಬೀದಿನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ವಿದ್ಯಾರ್ಥಿಗಳು ಪಡೆದುಕೊಂಡರು. ಹಾಗೂ ಶಕ್ತಿ ಫೇಸ್ಟ್-2024ರ ಚಾಂಪಿಯನ್‌ಶಿಪ್ ಕಪ್‌ನ್ನು ಸಂತ ಆಲೋಶಿಯಸ್ ಪದವಿಪೂರ್ವ ಕಾಲೇಜು ತನ್ನದಾಗಿಸಿಕೊಂಡಿತು. ಹಾಗೂ ರನ್ನರ್ಸ್ ಕಪ್‌ನ್ನು ಕ್ಯಾಂಬ್ರಿಡ್ಜ್ ಶಾಲೆಯು ಪಡೆದುಕೊಂಡಿತು.











Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article