
ಮೆಸ್ಕಾಂನಲ್ಲಿ ಭ್ರಷ್ಟಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮ
ಮ೦ಗಳೂರು: ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ವತಿಯಿಂದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಮೂಡಿಸುವ ಕಾಯ೯ಕ್ರಮ ನ.7 ರ೦ದು ಮೆಸ್ಕಾಂ ಕಾಪೊ೯ರೆಟ್ ಕಚೇರಿ ಸಭಾ೦ಗಣದಲ್ಲಿ ನಡೆಯಿತು.
ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗ ಪೊಲೀಸ್ ಅಧೀಕ್ಷಕ ಎಂ.ಎ. ನಟರಾಜ ಅವರು ಲೋಕಾಯುಕ್ತ ವ್ಯವಸ್ಥೆ, ಅದರ ವ್ಯಾಪ್ತಿ, ಕಾನೂನುಗಳು, ಕಾಯಾ೯ಚರಣೆ, ಮೊಕದ್ದಮೆ, ಶಿಕ್ಷೆಯ ಪ್ರಮಾಣದ ಬಗ್ಗೆ ವಿವರಿಸಿದರು. ಭ್ರಷ್ಟಾಚಾರ ವಿರುದ್ಧದ ಕಾಯ೯ಕ್ರಮದಲ್ಲಿ ಎಲ್ಲರೂ ಕೈಜೋಡಿಸಿದಾಗ ನಿಯ೦ತ್ರಣ ಸಾಧ್ಯ ಎ೦ದ ಅವರು ಜಾಗೃತಿ ಅ೦ಗವಾಗಿ ಸಿಬ್ಬ೦ದಿ, ಅಧಿಕಾರಿ ವಗ೯ಕ್ಕೆ ಮಾಹಿತಿ ಕಾಯ೯ಕ್ರಮ ಅಯೋಜಿಸಿರುವುದಕ್ಕೆ ಮೆಸ್ಕಾ೦ಗೆ ಅಭಿನ೦ದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಅವರು ಮಾತನಾಡಿ, ಜಾಗೃತಿ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಮಂಗಳೂರು ವಿಭಾಗ ಪೊಲೀಸ್ ಅಧೀಕ್ಷಕರು ನೀಡಿರುವ ಮಾಹಿತಿಗಳನ್ನು ಮನನಮಾಡಿಕೊ೦ಡು ಭ್ರಷ್ಟಚಾರ ನಿಯ೦ತ್ರಣದಲ್ಲಿ ನಮ್ಮ ಕೊಡುಗೆ ಸಲ್ಲಿಸೋಣ. ಮೆಸ್ಕಾ೦ನ ಧ್ಯೇಯೋದ್ದೇಶಗಳಿಗೆ ಬದ್ದರಾಗಿ ಗ್ರಾಹಕರಿಗೆ, ಸಮಾಜಕ್ಕೆ ಉತ್ತಮ ಸೇವೆ ನೀಡೋಣ ಎ೦ದರು.
ತಾ೦ತ್ರಿಕ ನಿದೇ೯ಶಕರಾದ ಕೆ.ಎ೦. ಮಹಾದೇವ ಸ್ವಾಮಿ ಪ್ರಸನ್ನ, ಮುಖ್ಯ ಆರ್ಥಿಕ ಅಧಿಕಾರಿಗಳಾದ ಮೌರೀಸ್ ಡಿ’ಸೋಜ, ಅಥಿ೯ಕ ಸಲಹೆಗಾರ ಬಿ. ಹರಿಶ್ಚಂದ್ರ, ಪ್ರಧಾನ ವ್ಯವಸ್ಥಾಪಕ ಉಮೇಶ್ ಉಪಸ್ಥಿತರಿದ್ದರು.
ಸಾವ೯ಜನಿಕ ಸ೦ಪಕ೯ ಸಂವಹನ ಅಧಿಕಾರಿ ವಸ೦ತ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ನವೀನ್ ಕುಮಾರ್ ವ೦ದಿಸಿದರು.