
ಗುತ್ತಿಗೆದಾರ ಮಾಧವ ಭಂಡಾರಿ ನಿಧನ
Wednesday, November 20, 2024
ಮೂಡುಬಿದಿರೆ: ಬೆಳುವಾಯಿ ಪಂಚಾಯಿತಿ ಮಾಜಿ ಸದಸ್ಯ, ಕಾನಾ ನಿವಾಸಿ ಸಿವಿಲ್ ಗುತ್ತಿಗೆದಾರ ಮಾಧವ ಭಂಡಾರಿ(61)ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಈ ಹಿಂದೆ
ಮೂಡುಬಿದಿರೆಯಲ್ಲಿ ಹಲವು ವರ್ಷ ಸ್ವಂತ ಸೆಲೂನ್ ಹೊಂದಿದ್ದರು. ಸಿವಿಲ್ ಗುತ್ತಿಗೆದಾರರಾಗಿದ್ದು ಜತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಿದ್ದರು. ಅವರಿಗೆ ಪತ್ನಿ,ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದಾರೆ.