ಜಾನುವಾರು ಕಳವು ಯತ್ನ: ಇಬ್ಬರು ಪೊಲೀಸರ ವಶಕ್ಕೆ

ಜಾನುವಾರು ಕಳವು ಯತ್ನ: ಇಬ್ಬರು ಪೊಲೀಸರ ವಶಕ್ಕೆ


ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಮನೆಯೊಂದರ ಹಟ್ಟಿಯಿಂದ ಜಾನುವಾರುಗಳನ್ನು ಕಳವು ಗೈಯಲು ಯತ್ನಿಸುತ್ತಿದ್ದ  ತಂಡದ ಇಬ್ಬರನ್ನು ಮೂಡುಬಿದಿರೆ ಪೊಲೀಸ್‌ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ ನೇತೃತ್ವದ ಪೊಲೀಸರ ತಂಡವು ಬಂಧಿಸಿದೆ.

ಪುರಸಭಾ ವ್ಯಾಪ್ತಿಯ ಗಂಟಾಲ್ ಕಟ್ಟೆ ನಿವಾಸಿಗಳಾದ ಮಹಮ್ಮದ್ ಸಫಾನ್ ಮತ್ತು ಸಲೀಂ ಬಂಧಿತ ಆರೋಪಿಗಳು.

ನ. 22ರ ನಸುಕಿನ ಜಾವ 2.15ರ ವೇಳೆಗೆ ಮೂಡುಬಿದಿರೆಯ ನೆಲ್ಲಿಕಾರಿನ ಬೋರುಗುಡ್ಡೆ ಎಂಬಲ್ಲಿ ಪಂಜ ಮನೆಯ ಹಟ್ಟಿಯ ಬಳಿ ಬಿಳಿ ಕಾರೊಂದು ನಿಲ್ಲಿಸಲಾಗಿತ್ತು. ಕಾರಿನ ಶಬ್ದ ಕೇಳಿ ಮನೆ ಮಂದಿ ಹೊರಬಂದಾಗ ಕಾರು ಚಾಲನೆಯ ಸ್ಥಿತಿಯಲ್ಲಿ ಕಂಡು ಬಂತು. ಆ ದೃಶ್ಯಾವಳಿ ಕಂಡು ಮನೆಮಂದಿ ಬೊಬ್ಬೆ ಹಾಕಿದಾಗ ಕಾರು ಅಲ್ಲಿಂದ ಹೊರಟುಹೋಗಿತ್ತು. ನೆರೆಕರೆಯವರು ಸೇರಿಕೊಂಡು ದುಷ್ಕರ್ಮಿಗಳು ಬಂದಿದ್ದ ಕಾರನ್ನು ಹಿಂಬಾಲಿಸಿ ಹೋದಾಗ ಆ ಕಾರಿನ ಚಾಲಕನ ನಿರ್ಲಕ್ಷ್ಯ ದಿಂದಾಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿತ್ತು. ದುಷ್ಕರ್ಮಿಗಳು ಪರಾರಿಯಾಗಿದ್ದರು. ದುಷ್ಕರ್ಮಿಗಳು ಬಂದಿದ್ದ ಕಾರಿನ ನಂಬ್ರ KA- 20-Z-2879 ಆಗಿದ್ದು ಮಾಹಿತಿಯನ್ವಯ ಆರೋಪಿಗಳ ಪತ್ತೆ ಹಚ್ಚಲು ಪೊಲೀಸರಿಗೆ ಸಹಕಾರಿಯಾಗಿದೆ. ದನ ಕಳವುಗೈಯಲು ವಿಫಲಯತ್ನ ನಡೆಸಿರುವುದಾಗಿ ಆರೋಪಿಗಳು ತಪ್ರೊಪ್ಪಿಕೊಂಡಿದ್ದು, ಈ ಹಿಂದೆ ಇದೇ ದಂಧೆ ನಡೆಸಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article