ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್‌ನ ಕರಾಳ ಮುಖಗಳು ಬಯಲು
ಮುಲ್ಕಿ: ಪಕ್ಷಿಕೆರೆ ಕೊಲೆ ಮತ್ತು ಕಾರ್ತಿಕ್ ಭಟ್ ಅತ್ಮಹತ್ಯೆ ಪ್ರಕರಣದ ರೋಚಕ ಸಂಗತಿಗಳು ಮತ್ತಷ್ಟು ಬೆಳಕಿಗೆ ಬಂದಿದ್ದು ಆತ್ಮಹತ್ಯೆ ಮಾಡಿಕೊಂಡ ಕಾರ್ತಿಕ್ ಭಟ್‌ನ ಕರಾಳ ಮುಖಗಳು ಬಯಲಿಗೆ ಬಂದಿದೆ.
ಪಕ್ಷಿಕೆರೆ ಪರಿಸರದಲ್ಲಿ ಸಾಕಷ್ಟು ಜನರಿಗೆ ಹಣಕಾಸಿನ ಹಾಗೂ ಚಿನ್ನಾಭರಣ ವಿಷಯದಲ್ಲಿ ಮೋಸ ಮಾಡಿರುವ ಕಾರ್ತಿಕ್ ತಮ್ಮ ಮನೆಯವರನ್ನು ಕೂಡ ಮೋಸದ ಬಲೆಗೆ ಕೆಡವಿರುವುದು ಬಯಲಿಗೆ ಬಂದಿದೆ.
ಕೆಲ ತಿಂಗಳ ಹಿಂದೆ ಕಾರ್ತಿಕ್ ಭಟ್ ತನ್ನ ತಂದೆ ತಾಯಿಯ ಕೊಣೆಗೆ ತೆರಳಿ ತನ್ನ ತಾಯಿ ಶ್ಯಾಮಲ ಅವರ ಸುಮಾರು 1 ಲಕ್ಷ ಬೆಲೆ ಬಾಳುವ ಚಿನ್ನದ ಲಕ್ಷೀ ಸರವನ್ನು ಕಳವು ಮಾಡಿದ್ದು, ಸಂಜೆ ತಮ್ಮ ಹೋಟೇಲು ಕೆಲಸ ಮುಗಿಸಿ ವಾಪಾಸಾದಾಗ ತಾಯಿ ಶ್ಯಾಮಲಾ ರವರಿಗೆ ತಿಳಿದು ಬಂದಿದ್ದು ಮೌನ ವಹಿಸಿದ್ದರು. ಬಳಿಕ ತಾವು ಹೊರಗಡೆ ಹೋಗುವಾಗ ಕಪಾಟಿಗೆ ಬೀಗ ಹಾಕಿ ತೆರಳುತ್ತಿದ್ದರು. ಈ ನಡುವೆ ಕಳವಾದ ಲಕ್ಷ್ಮೀ ಸರ ಅವರಿಗೆ ಪ್ರಿಯವಾದ ಸರವಾದ್ದರಿಂದ ಸಾಲ ಮಾಡಿ ಹೊಸ ಸರ ಮಾಡಿಸಿಕೊಂಡಿದ್ದರು.
ಇದೇ ರೀತಿ ಮನೆಯಿಂದ ಸಣ್ಣ ಪುಟ್ಟ ಹಣವನ್ನು ಕಳವು ಮಾಡುತ್ತಿದ್ದು ಪೋಷಕರು ಮೌನವಹಿಸಿದ್ದರು. ಕಾರ್ತಿಕ್ ಭಟ್ ಕೆಲಸ ಮಾಡುತ್ತಿದ್ದ ಸೊಸೈಟಿಯಲ್ಲಿ ಅಧಿಕಾರ ದುರುಪಯೋಗಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳೇ ರಾಜಿನಾಮೆ ಕೊಡಿಸಿದ್ದರು.
ಕಾರ್ತಿಕ್ ಇತ್ತೀಚಿನ ಕೆಲ ವರ್ಷಗಳಲ್ಲಿ ದುರಾಭ್ಯಾಸವನ್ನೂ ಮೈಗೂಡಿಸಿದ್ದ, ಹೆಚ್ಚಿನ ಸಂದರ್ಭಗಳಲ್ಲಿ ನಶೆಯಲ್ಲಿ ಇರುತ್ತಿದ್ದ, ಕಾರ್ತಿಕ್ ಕೊಲೆ ಮತ್ತು ಅತ್ಮಹತ್ಯೆ ಮಾಡಿನ ದಿನ ಬೆಳಿಗ್ಗೆ ತೋಕೂರು ಸಮೀಪದ ಅಂಗಡಿಯೊಂದರ ಮುಂಭಾಗದಲ್ಲಿ ಸಿಗರೇಟ್ ಸೇದುತ್ತಿದ್ದ ಕೈಗೆ ಬಟ್ಟೆ ಸುತ್ತಲಾಗಿತ್ತು ಪರಿಚಯದವರೂ ಈ ಬಗ್ಗೆ ವಿಚಾರಿಸಿದಾಗ ಸ್ಕೂಟರ್ ನಲ್ಲಿ ಬಿದ್ದ ಕಾರಣ ಗಾಯವಾಗಿದೆ ಎಂದು ನೆಪ ಹೇಳಿದ್ದಾನೆ.
ಮಗುವನ್ನು ಕೋಣೆಗೆ ಹಾಕಿ ಬೀಗ ಹಾಕಿದ್ದ ಕಾರ್ತಿಕ್:
ಜನಾರ್ದನ ಭಟ್, ಶ್ಯಾಮಲ ಭಟ್ ದಂಪತಿಗಳು ಒಂದು ದಿನ ಹೊಟೇಲು ಕೆಲಸ ಮುಗಿಸಿ, ಮನೆಗೆ ವಾಪಸ್ಸಾಗುವಾಗ ಮನೆಯಲ್ಲಿ ಕಾರ್ತಿಕ್ ಕೋಣೆಗೆ ಬೀಗ ಹಾಕಲಾಗಿತ್ತು, ಆದರೆ ಕೊಣೆಯ ಒಳಗಿಂದ ಕಾರ್ತಿಕ್ ಮಗು ಜೋರಾಗಿ ಅಳುವ ಸದ್ದು ಕೇಳುತ್ತಿತ್ತು ಕೂಡಲೇ ಕೊಣೆಯ ಬಳಿ ಹೋಗಿ ಬಾಗಿಲು ತೆಗೆಯಲು ಯತ್ನಿಸಿದಾಗ ಕೊಣೆಗೆ ಬೀಗ ಹಾಕಲಾಗಿತ್ತು. ಆದರೆ ಕಾರ್ತಿಕ್ ತಂದೆ ತಾಯಿಗಳು ಹೊರಗಿನಿಂದ ಮಗುವನ್ನು ಸಮಾದಾನ ಪಡಿಸುತ್ತಿದ್ದರು, ಕಾರ್ತಿಕ್ ಬಂದ ನಂತರ ಜನಾರ್ದನ ಭಟ್ ಮತ್ತು ತಾಯಿ ಶಾಮಲಾ ಭಟ್ ಮಗುವಿನ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿತ್ತು.
ಭವಿಷ್ಯ ನುಡಿದ್ದಿದ್ದ ಜ್ಯೋತಿಷ್ಯರು:
ಕಾರ್ತಿಕ್ ತನ್ನ ದುರಾಭ್ಯಾಸ ಬಿಡಬೇಕು, ಯಾವುದದರೂ ಒಳ್ಳೆಯ ಕೆಲಸಕ್ಕೆ ಸೇರಬೇಕು ಸಮಸ್ಯೆ ನಿವಾರಣೆ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಪ್ರಖ್ಯಾತ ಜ್ಯೋತಿಷ್ಯರ ಬಳಿ ಸಂಬಂಧಿಕರು ಕರೆದುಕೊಂಡು ಹೋಗಿ ಪ್ರಶ್ನಾ ಚಿಂತನೆ ನಡೆಸಿದಾಗ ಜ್ಯೋತಿಷ್ಯರು. ಮುಂದೊಂದು ದಿನ ನಿಮಗೆ ಈತನಿಂದಲೇ ಗಂಡಾಂತರವಿದೆ ಎಂದು ಭವಿಷ್ಯ ನುಡಿದಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಸತ್ತು ಹೋದ ಕಾರ್ತಿಕ್ ಮುದ್ದಿನ ನಾಯಿ:
ಕಾರ್ತಿಕ್ ವಾಸಿಸುತ್ತಿದ್ದ ಪ್ಲಾಟ್ ಕೆಳಗೆ ಬೀದಿ ನಾಯಿ ಇದ್ದು, ಕಾರ್ತಿಕ್ ಅಪಾರ ಪ್ರೀತಿ ಹೊಂದಿದ್ದ ಪ್ರತೀ ದಿನ ಇದಕ್ಕೆ ಬಿಸ್ಕಿಟ್ ಹಾಕುತ್ತಿದ್ದ ಅದರೊಂದಿಗೆ ಮಾತಾಡುತ್ತ ಹೊತ್ತು ಕಳೆಯುತ್ತಿದ್ದ, ಆದರೆ ಕಾರ್ತಿಕ್ ಅತ್ಮಹತ್ಯೆ ಮಾಡಿ ಒಂದು ವಾರದ ಬಳಿಕ ಅಂದರೆ ಶುಕ್ರವಾರ ಸಂಜೆ ಹೊತ್ತು, ಕಾರ್ತಿಕ್ ವಾಸವಿದ್ದ ಪ್ಲಾಟ್ ಕೆಳಗೆ ಆ ನಾಯಿ ಕೂಡ ಸತ್ತು ಹೋಗಿದೆ.
ಕೊಲೆ ನಡೆದ ದಿನ ಕಾರ್ತಿಕ್ ಭಟ್ ವಾಸಿಸುತ್ತಿದ್ದ ಫ್ಲ್ಯಾಟ್ ಕೆಳ ಭಾಗದಲ್ಲಿ ಮಧ್ಯ ಸೇವಿಸಿದ ವ್ಯಕ್ತಿಯೋರ್ವರು ಕೊಣೆಯಲ್ಲಿ ಏನೋ ನಡೆಯುತ್ತಿದೆ ಎಂದು ಗಟ್ಟಿಯಾಗಿ ಹೇಳುತ್ತಿದ್ದರು ಆದರೆ ಮಧ್ಯ ಸೇವಿಸಿದ ವ್ಯಕ್ತಿ ಹೇಳುತ್ತಿದ್ದ ಕಾರಣ ಹೇಳಿದರ ಕಾರಣ ಯಾರೂ ಈ ಬಗ್ಗೆ ಗಮನ ಹರಿಸಿಲ್ಲ ಎನ್ನಲಾಗಿದೆ, ಅಲ್ಲದೆ ಸ್ಥಳೀಯ ಗ್ರಾಮ ಪಂಚಾಯತ್ ವತಿಯಿಂದ ಇವರು ವಾಸಿಸುತ್ತಿದ್ದ ಪ್ಲಾಟ್ ಕೆಳಗೆ ಎರಡು ಯಂತ್ರದ ಮೂಲಕ ಹುಲ್ಲು ಕಟ್ಟಿಂಗ್ ಮಾಡುತ್ತಿದ್ದ ಕಾರಣ ವಿಪರೀತ ಶಬ್ದ ಬರುತ್ತಿದ್ದ ಕಾರಣ ಕೊಲೆ ನಡೆದ ಸಂದರ್ಭದ ಕಿರುಚಾಟ ಕೇಳಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ತಿಂಗಳ ಹಿಂದೆ ದಾಖಲೆ ನೀಡಿದ್ದ:
ಕೊಲೆ ಮತ್ತು ಅತ್ಮಹತ್ಯೆ ಮಾಡಿದ ಸುಮಾರು ಒಂದು ತಿಂಗಳ ಹಿಂದೆ ಕಪ್ಪು ಕಾರಿನಲ್ಲಿ ಇಬ್ಬರು ಬಂದಿದ್ದು, ಕಾರ್ತಿಕ್ ಯಾವುದೋ ದಾಖಲೆಯ ಝೇರಾಕ್ಸ್ ಪ್ರತಿಯನ್ನು ನೀಡಿದ್ದ ಎಂದು ಕಂಡವರು ತಿಳಿಸಿದ್ದಾರೆ.
ಹೊಸ ಸ್ಕೂಟರ್ ಖರೀದಿಸಿದ್ದ:
ಕಂಡ ಕಂಡವರ ಜೊತೆ ಸಾಲ ಮಾಡಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಕಾರ್ತಿಕ್ ಭಟ್ ಇತ್ತೀಚೆಗಷ್ಟೇ ಹೊಸ ಸ್ಕೂಟರ್ ಖರೀದಿಸಿದ್ದ ಹಾಗೂ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಬಳಿಯ ಐಷಾರಾಮಿ ನರ್ಸರಿ ಸ್ಕೂಲ್‌ಗೆ ಮಗುವನ್ನು ಕಲಿಕೆಗೆ ಸೇರಿಸಿದ್ದು ತಾನೇ ಕರೆದುಕೊಂಡು ಹೋಗಿ ಬಿಟ್ಟು ಕರೆದುಕೊಂಡು ಬರುತ್ತಿದ್ದ ಹಾಗೂ ಪತ್ನಿ ಪ್ರಿಯಾಂಕ ಸುರತ್ಕಲ್‌ನ ಜಿಮ್‌ಗೆ ಕೂಡ ಹೋಗುತ್ತಿದ್ದರು ಎನ್ನಲಾಗಿದೆ.
ಶನಿವಾರ ಕಾರ್ತಿಕ್ ಭಟ್ ತಾಯಿ ಹಾಗೂ ಸಹೋದರಿಯ ವಿಚಾರಣೆ ಸಾಧ್ಯತೆ:
ಕಾರ್ತಿಕ್ ಭಟ್ ಆತ್ಮಹತ್ಯೆ ಹಾಗೂ ಪತ್ನಿ ಹಾಗೂ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರೇರಣೆ ನೀಡಿದ ಯತ್ನದಲ್ಲಿ ದೂರಿನ ಅನ್ವಯ ಜೈಲಿಗೆ ಹೋಗಿರುವ ಕಾರ್ತಿಕ್ ಭಟ್ ತಾಯಿ ಶ್ಯಾಮಲ ಹಾಗೂ ಸಹೋದರಿ ಕಣ್ಮಣಿ ರಾವ್ ವಿಚಾರಣೆ ಶನಿವಾರ ನಡೆಯಲಿದ್ದು ಭಾನುವಾರ ಸೋಮವಾರ ನ್ಯಾಯಾಲಯಕ್ಕೆ ರಜಾದಿನವಾಗಲಿದ್ದು ಜಾಮೀನು ಬಗ್ಗೆ ಭವಿಷ್ಯ ನಿರ್ಧಾರವಾಗಲಿದೆ.