
ವಾರ್ಷಿಕ ಹಬ್ಬಕ್ಕೆ ಕ್ರೈಸ್ತರಿಂದ ವೀಳ್ಯದೆಲೆ ಅಡಿಕೆ ಹಾಗೂ ಬಾಳೆಗೊನೆ ನೀಡಿ ಗೌರವ
Wednesday, November 27, 2024
ಮೂಲ್ಕಿ: 1784ರಲ್ಲಿ ಟಿಪ್ಪು ಸುಲ್ತಾನ್ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯ ರೆಮೆದಿ ಅಮ್ಮನವರ ಕ್ರೈಸ್ತರ ಪ್ರಾರ್ಥನಾ ಮಂದಿರಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಸ್ಥಳೀಯ ಗುತ್ತು ಮನೆತನಗಳಾದ ತಾಳಿಪಾಡಿ ಗುತ್ತು, ಅಂಗಡಿಗುತ್ತು ಹಾಗೂ ಐಕಳಭಾವದವರು ಪ್ರಾರ್ಥನಾ ಮಂದಿರವನ್ನು ರಕ್ಷಿಸಿದ್ದರು.
ಇದರ ನೆನಪಿಗಾಗಿ ಇಂದಿಗೂ ಕೂಡ ಕ್ರೈಸ್ತರು, ಗುತ್ತು ಮನೆತನದವರನ್ನು ಗುರುತಿಸಿದ್ದು ಪ್ರಾರ್ಥನಾ ಮಂದಿರದ ವಾರ್ಷಿಕ ಹಬ್ಬದಂದು ಧರ್ಮಗುರು ವಂ.ಫಾ. ಓಸ್ವೋಲ್ಡ್ ಮೊಂತೆರೋ ವೀಳ್ಯದೆಲೆ ಅಡಿಕೆ ಹಾಗೂ ಬಾಳೆಗೊನೆ ನೀಡಿ ಗೌರವಿಸಿದರು.
ಫಾ. ಜಾರ್ಜ್ ಕ್ರಾಸ್ತ, ಪಾಲನ ಮಂಡಳಿಯ ಉಪಾಧ್ಯಕ್ಷ ರಿಚರ್ಡ್ ಡಿ’ಕೋಸ್ತ, ಕಾರ್ಯದರ್ಶಿ ಜೇಮ್ಸ್ ಲೋಬೊ, ಫಾದರ್ ಫ್ರಾನ್ಸಿಸ್ ಫೆರ್ನಾಂಡಿಸ್, ತಾಳಿಪಾಡಿ ಗುತ್ತು ದಿನೇಶ್ ಬಂಡ್ರಿಯಾಲ್, ಅಂಗಡಿಗುತ್ತು ಬಾಲಕೃಷ್ಣ ಶೆಟ್ಟಿ, ಐಕಳಬಾವ ಜಯಪಾಲ ಶೆಟ್ಟಿ, ಸುಕುಮಾರ್ ಶೆಟ್ಟಿ ತಾಳಿಪಾಡಿ ಗುತ್ತು, ಶಂಭು ಶೆಟ್ಟಿ ಅಂಗಡಿಗುತ್ತು, ಐಕಳ ಬಾವ ಚಿತ್ತರಂಜನ್ ಭಂಡಾರಿ, ಪ್ರಸಾದ್ ಶೆಟ್ಟಿ, ದರ್ಶನ್ ಶೆಟ್ಟಿ, ಲೀಲಾಧರ ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.