
ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ ಕಂಪನಿ ಸೆಕ್ರೆಟರಿ ಪರೀಕ್ಷೆಯಲ್ಲಿ ತೇರ್ಗಡೆ
ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಸ್ವಾತಿ ಡಿ. ಗೌಡ ಕಂಪನಿ ಸೆಕ್ರೆಟರಿಯ ಪ್ರವೇಶ ಪರೀಕ್ಷೆ ಸಿ.ಎಸ್ ಈಈಟಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರಸ್ತುತ ವರ್ಷದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಐಸಿಎಸ್‌ಐನೊಂದಿಗಿನ ಸಹಯೋಗದಿಂದ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸಿ ಅವರನ್ನು ಕಂಪನಿ ಸೆಕ್ರೆಟರಿ ಕೋರ್ಸ್‌ಗೆ ಅಥವಾ ತತ್ಸಮಾನ ಕೋರ್ಸ್‌ಗಳಿಗೆ ಸೇರುವಂತೆ ಅಣಿಗೊಳಿಸಲಾಗುತ್ತದೆ. ಸಂಸ್ಥೆಯು ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ ದ ಏಕೈಕ ಅಧ್ಯಯನ ಕೇಂದ್ರವಾಗಿದೆ.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಐಸಿಸ್‌ಐ ಮಂಗಳೂರು ಚಾಪ್ಟರ್ ಜೊತೆ ಒಪ್ಪಂದ ಮಾಡಿಕೊಂಡು ಪುತ್ತೂರಿನ ಸ್ಟಡಿ ಸೆಂಟರ್ ಆಗಿ ಐಸಿಎಸ್‌ಐ ಜೊತೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತದೆ. ಈಗಾಗಲೇ ಈ ಅಧ್ಯಯನ ಕೇಂದ್ರದ ಮೂಲಕ ವಿದ್ಯಾರ್ಥಿಗಳಿಗೆ ಸಿಎಸ್ ಕೋರ್ಸ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತ ಬಂದಿರುತ್ತದೆ.
ಕಾಲೇಜಿನ ವ್ಯವಹಾರ ಆಡಳಿತ ವಿಭಾಗವು ವಿದ್ಯಾಥಿಗಳ ಕೌಶಲ್ಯ ಅಭಿವೃದ್ಧಿ ಕಡೆ ಗಮನ ತೋರುತ್ತಾ ಇಂತಹ ನವ ನವೀನ ವಿಷಯಗಳ್ಳನ್ನು ನೀಡುತ್ತಾ ಕಾಲೇಜಿನ ಮತ್ತು ಬಿಬಿಎ ಕೋರ್ಸ್‌ನ ಘನತೆ ಮತ್ತು ಗೌರವವನ್ನು ಹೆಚ್ಚಿಸುವ ಕಾರ್ಯ ಮಾಡುತ್ತ ಬಂದಿರುತ್ತದೆ. ಇದು ಶಿಕ್ಷಕರಿಗೆ ಮತ್ತು ಕಾಲೇಜಿಗೆ ವಿದ್ಯಾರ್ಥಿಗಳ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ ಎಂದು ಕಾಲೇಜಿನ ಪ್ರಾಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಸಂಯೋಷ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ಪ್ರೊಫೆಷನಲ್ ಕೋರ್ಸ್ ಅನ್ನು ಕಲಿಯಲು ಮಂಗಳೂರು ಮುಂತಾದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇದನ್ನರಿತ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಪ್ರಾಶುಪಾಲರೊಡನೆ ಚರ್ಚಿಸಿ ಪ್ರಸ್ತುತ ವರುಷ ಬಿಬಿಎ ವಿಥ್ ಕಂಪನಿ ಸೆಕ್ರೆಟರಿ ಕೋರ್ಸ್ ನೀಡುವ ಬಗ್ಗೆ ಯೋಚಿಸಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಿಎಸ್ ಕೋಸ್ರ್ ನೀಡುವ ಉದ್ದೇಶದಿಂದ ಐಸಿಎಸ್‌ಐ ಜೊತೆ ಒಪ್ಪಂದ ಮಾಡಿಕೊಂಡಿದ್ದು ಬಿಬಿ ಆ ಕೋರ್ಸ್ ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಸಿಎಸ್ ಕೋಸ್ ನೀಡುತ್ತಿದೆ ಎಂದು ವಿಭಾಗ ಮುಖ್ಯಸ್ಥರಾದ ರಾಧಾಕೃಷ್ಣ ಗೌಡ ತಿಳಿಸಿದರು.
ಸ್ವಾತಿ ಡಿ. ಗೌಡ ಇವರು ದೊಂಬಯ್ಯ ಕೆ. ಗೌಡ ಮತ್ತು ಲೀಲಾವತಿ ಇವರ ಪುತ್ರಿಯಾಗಿರುತ್ತಾರೆ.