
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16-17 ರಂದು ಉದ್ಯೋಗ ಮೇಳ
ಉಡುಪಿ: ಮಣಿಪುರ ಗ್ರಾಮದಲ್ಲಿರುವ ಕುಂತಳ ನಗರದಲ್ಲಿ ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ವತಿಯಿಂದ ಎಂಆರ್ಜಿ ಗ್ರೂಪ್ನ ಪ್ರಯೋಜಕತ್ವದಲ್ಲಿ 3ನೇ ಬಾರಿಗೆ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 ಮತ್ತು 17 ರಂದು ನಡೆಯಲಿದೆ ಎಂದು ಗ್ರಾಮೀಣ ಬಂಟರ ಸಂಘದ ಟ್ರಸ್ಸಟ್ನ ಅಧ್ಯಕ್ಷ ಅಶೋಕ ಕುಮಾರ್ ಶೆಟ್ಟಿ ತಿಳಿಸಿದರು.
ಅವರು ಶನಿವಾರ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಬಾರಿ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮವನ್ನು ನವೆಂಬರ್ ನ.16 ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ, ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನಲ್ಲಿ ಎಂಆರ್ಜಿ ಗ್ರೂಪ್ ಇದರ ಛೇರ್ಮನ್ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರು, ಮಂತ್ರಿಗಳು ಶಾಸಕರು, ಮಾಜಿ ಶಾಸಕರು ಮತ್ತು ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.
ಈಗಾಗಲೇ ಅನೇಕ ಬೃಹತ್ ಕಂಪನಿಯವರು ಉದ್ಯೋಗ ಮೇಳಕ್ಕೆ ಆಗಮಿಸಲು ರಿಜಿಸ್ಟರ್ ಮಾಡಿದ್ದಾರೆ. ಅಭ್ಯರ್ಥಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡುತ್ತಿದ್ದಾರೆ.
ಐಟಿ, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಮತ್ತು ಐಟಿಐ ಮಾಡಿದ ಮತ್ತು ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಅಭ್ಯರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶಗಳಿವೆ. ಈಗ ನೋಂದಣಿ ಮಾಡಿದ ಕಂಪನಿಗಳ ಪ್ರಕಾರ ಸುಮಾರು 1000 ಹುದ್ದೆಗಳಿಗೆ ಇಂಜಿನಿಯರಿಂಗ್ ವಲಯದಲ್ಲಿ ಅವಕಾಶಗಳಿವೆ.
ಬಿ.ಎ, ಬಿ.ಕಾಮ್, ಬಿ.ಎಸ್ಸಿ, ಬಿ.ಬಿ.ಎಂ, ಬಿ.ಸಿ.ಎ ಮತ್ತು ಇನ್ನಿತರ ಡಿಗ್ರಿ ಮಾಡಿದವರಿಗೆ ಮತ್ತು ಎಂ.ಸಿ.ಎ, ಎಂ.ಬಿ.ಎ, ಎಂ.ಎಸ್ಸಿ, ಮಾಡಿದ ಅಭ್ಯರ್ಥಿಗಳಿಗೆ ಸುಮಾರು 500 ಕ್ಕಿಂತಲೂ ಹೆಚ್ಚು ಹುದ್ದೆಗಳಿಗೆ ಅವಕಾಶಗಳಿವೆ.
ನಮ್ಮ ಗ್ರಾಮೀಣ ಬಂಟರ ಸ್ಕಿಲ್ ಡೆವಲಪ್ಮೆಂಟ್ನ ಮುಖ್ಯ ಉದ್ದೇಶ ಸ್ಥಳೀಯ ಯುವಕರಿಗೆ ಮತ್ತು ಮಹಿಳೆಯವರಿಗೆ ಸ್ವ-ಉದ್ಯೋಗ ಅಥವಾ ಉದ್ಯೋಗ ಸಿಗುವಂತೆ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಉತ್ತಮ ಕಂಪನಿ ಗಳನ್ನು ಕರೆಯಿಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಎಚ್ಬಿ ಶೆಟ್ಟಿ, ವಿಶ್ವಸ್ಥರುಗಳಾದ ಹರೀಶ್ ಶೆಟ್ಟ ಬೆಳ್ಳೆ, ಹರೀದ್ರ ಹೆಗ್ಡೆ ಕೊರಂಗ್ರಪಾಡಿ, ಸತೀಶ್ ಶೆಟ್ಟಿ ಮಣಿಪುರ ದಯಾನಂದ ಶೆಟ್ಟಿ ಕಲ್ಮಂಜೆ ಉಪಸ್ಥಿತರಿದ್ದರು.
ಟ್ರಸ್ಟ್ನ ಕೋಶಾಧಿಕಾರಿ ವಿಜಿತ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟಿಗಳಾದ ಪದ್ಮನಾಭ ಹೆಗ್ಡೆ ವಂದಿಸಿದರು.