ಉಡುಪಿ: ನವಂಬರ್ 27ರಂದು ಮಥುರಾ ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆಗಾಗಿ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ಕೇಶವ ಧಾಮ ಶ್ರೀ ಧಾಮ ವೃಂದಾವನದಲ್ಲಿ ಅಂತರರಾಷ್ಟ್ರೀಯ ಸಂಸತ್ತು ನಡೆಯಲಿದ್ದು, ಪ್ರಥಮ ಸಂಸತ್ ಸಭೆಯಲ್ಲಿ ಕರ್ನಾಟಕದಿಂದ ಉಡುಪಿ ಜಿಲ್ಲೆಯ ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಭಾಗವಹಿಸಲಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಿದೆ.