
ಪಹಣಿಗೆ ಆಧಾರ್ ಜೋಡಣೆ
Tuesday, November 5, 2024
ಉಡುಪಿ: ಜಿಲ್ಲೆಯಲ್ಲಿ ಪಹಣಿಗೆ ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಪ್ರಕ್ರಿಯೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಖಾತಾದಾರರು ಮರಣ ಹೊಂದಿರುವ ಬಗ್ಗೆ ತಂತ್ರಾಂಶದಲ್ಲಿ ನಮೂದಿಸಿದ್ದು ಅಂಥ ಪ್ರಕರಣಗಳಲ್ಲಿ ಪೌತಿ/ ವಾರೀಸು ಖಾತೆ ಆಂದೋಲನವನ್ನು ಆಯಾಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನ.7ರಂದು ಉಡುಪಿ, 8ರಂದು ಕುಂದಾಪುರ, 11ರಂದು ಕಾರ್ಕಳ, 12ರಂದು ಬ್ರಹ್ಮಾವರ, 13ರಂದು ಬ್ರಹ್ಮಾವರ ಮತ್ತು ಬೈಂದೂರು, 14ರಂದು ಕಾಪು ಮತ್ತು 15ರಂದು ಹೆಬ್ರಿ ತಾಲೂಕಿನಲ್ಲಿ ಕಾರ‍್ಯಕ್ರಮ ನಡೆಯಲಿದೆ.
ಜಿಲ್ಲೆಯಲ್ಲಿ ಪೌತಿ/ವಾರೀಸು ಖಾತೆ ಮಾಡಲು ಬಾಕಿ ಇರುವ ಜಮೀನಿನ ವಾರೀಸುದಾರರು ಆಯಾಯ ತಾಲೂಕು ಕಚೇರಿ ಅಥವಾ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಪೌತಿ ಆಂದೋಲನದಲ್ಲಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.