
ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ನ.28 ರಂದು ಲಲಿತಕಲಾ ಗೋಷ್ಠಿ
ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಲಕ್ಷದೀಪೋತ್ಸವ ಪ್ರಯುಕ್ತ ನ.28 ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಸಂಜೆ ಲಲಿತಕಲಾಗೋಷ್ಠಿಯಲ್ಲಿ ನಾಗಸ್ವರವಾದನ, ಶಂಕರ ಶಾನಭಾಗ್ ಮತ್ತು ತಂಡದಿಂದ ಸಾತ್ವಿಕ ಸಂಗೀತ ಹಾಗೂ ವಿದುಷಿ ಸುಮಂಗಲಾ ರತ್ನಾಕರ ರಾವ್ ನಿರ್ದೇಶನದಲ್ಲಿ ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನಡೆಯಲಿದೆ.
ಶ್ರೀ ಮಂಜುನಾಥ ಸ್ವಾಮಿಗೆ ಕಂಚಿಮಾರುಕಟ್ಟೆ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪ್ರೌಢ ಶಾಲಾ ಆವರಣದಲ್ಲಿ ನಡೆಯುತ್ತಿರುವ ವಸ್ತು ಪ್ರದರ್ಶನ ಮಂಟಪದ ವೇದಿಕೆಯಲ್ಲಿ ಸಂಜೆ 6.15 ರಿಂದ ಮಂಗಳೂರಿನ ಆತ್ಮಶ್ರೀ ಮತ್ತು ಆದಿ ಶ್ರೀ ಸಹೋದರಿಯರಿಂದ ಗಾನ ಸಂಭ್ರಮ, ಉಚ್ಚಿಲ ನಟೇಶ ನೃತ್ಯ ನಿಕೇತನದ ವಿದುಷಿ ಮಂಗಳಾ ಕಿಶೋರ್ ನಿರ್ದೇಶನದಲ್ಲಿ ಭರತನಾಟ್ಯ ಮತ್ತು ಕೂಚಿಪುಡಿ, ಬೆಂಗಳೂರಿನ ನೃತ್ಯ ಕುಟೀರ ವಿದುಷಿ ದೀಪ ಭಟ್ ನಿರ್ದೇಶನದಲ್ಲಿ ನೃತ್ಯ ರೂಪಕ ಹಾಗೂ ಪುತ್ತೂರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ ಭಾಸ್ಕರ ಬಾರ್ಯ ನಿರ್ದೇಶನದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.