
ಬಾಡಿಗೆ ವಿಚಾರದಲ್ಲಿ ಹೊಡೆದಾಟ ಪ್ರಕರಣ: ಇಬ್ಬರ ಬಂಧನ
ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪರ್ಲಿಯಾದಲ್ಲಿ ಬಾಡಿಗೆ ವಿಚಾರದಲ್ಲಿ ಎರಡು ತಂಡಗಳ ನಡುವೆಉಂಟಾ ಹೊಡೆದಾಟಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಎರಡೂ ತಂಡಗಳ ತಲಾ ಒಬ್ಬಬ್ಬರ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇತ್ತಂಡಗಳ ವಿರುದ್ಧವು ಪ್ರಕರಣ ದಾಖಲಾಗಿತ್ತು.
ಪರ್ಲಿಯಾ ಮದ್ದ ಮನೆ ನಿವಾಸಿ ಶಾಹುಲ್ ಹಮೀದ್ ಹಾಗೂ ತಾರಿಪಡ್ಪು ನಿವಾಸಿ, ಪುರಸಭಾ ಸದಸ್ಯ ಹಸೈನಾರ್ ಬಂಧಿತ ಆರೋಪಿಗಳು.
ಮನೆಯಂಗಳದಲ್ಲಿ ಎರಡು ತಂಡಗಳ ನಡುವಿನ ಹೊಡೆದಾಟ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆರೋಪಿಗಳಾದ ಹಸೈನಾರ್ ತಾಳಿಪಡ್ಪು, ರಫೀಕ್ ತಪಟ್ಟಿ ಬಂಟ್ವಾಳ, ಜಸೀಲ್ ತಲಪಾಡಿ, ಅಫೀಝ್ ತಲಪಾಡಿ, ರಿಯಾಜ್ ಕುಮೇರು, ಶಮೀರ್ ಚಮ್ಮಿ, ನೌಫಾಲ್ ಮಾರಿಪಲ್ಲ ಸಹಿತ 15 ಮಂದಿ ಅಕ್ರಮ ಕೂಟ ಸೇರಿ ಮಾರಕಾಯುಧಗಳೊಂದಿಗೆ ಶಾಹುಲ್ ಹಮೀದ್ ಅವರ ಮನೆಗೆ ನುಗ್ಗಿ ಗರ್ಭಿಣಿ ಮೇಲೆ ಹಲ್ಲೆ ಹಾಗೂ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಲ್ಲದೆ, ಶಾಹುಲ್ ಹಮೀದ್ ಅವರ ಪತ್ನಿ, ಮಕ್ಕಳ ಮೇಲುಇ ಹಲ್ಲೆ ನಡೆಸಲಾಗಿತ್ತೆಂದು ದೂರಲಾಗಿತ್ತು.
ಅಪ್ರಾಪ್ತ ಬಾಲಕಿ ಮೇಲೆ ದೌರ್ಜನ್ಯ ವೆಸಗಿದ ಈ ತಂಡ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಹಾಗೂ 30 ಸಾ. ನಗದನ್ನು ದೋಚಿ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತೆಂದು ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ಮಹಮ್ಮದ್ ಇರ್ಫಾನ್ ಎಂಬವರು ಎಸ್.ಎಚ್. ಶಾಹುಲ್, ಸಮೀರ್, ಸಫ್ವಾನ್, ಶಫೀಕ್ ಎಂಬ ಆರೋಪಿಗಳು ಮಹಮ್ಮದ್ ಇರ್ಫಾನ್, ಮೊಹಮ್ಮದ್ ಅಲ್ಮಸ್, ಮೊಹಮ್ಮದ್ ರಫೀಕ್, ಹಸೈನಾರ್ ಎಂಬವರ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಒಡ್ಡಿ 5 ಸಾವಿರ ರೂ. ನಗದನ್ನು ದೋಚಿದ್ದರೆಂದು ಆರೋಪಿಸಿ ದೂರು ನೀಡಲಾಗಿತ್ತು.