
ಮದುವೆ ಹಾಲ್‌ನ ಹಿಂಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು
Wednesday, December 25, 2024
ಬಂಟ್ವಾಳ: ತುಂಬೆ ಸಮೀಪದ ರಾಮಲ್ ಕಟ್ಟೆಯ ಮದುವೆ ಹಾಲ್‌ನ ಹಿಂಬದಿಯಲ್ಲಿ ನಿಲ್ಲಿಸಲಾಗಿದ್ದ ಮೋಟಾರ್ ಸೈಕಲ್ ಕಾಣೆಯಾದ ಬಗ್ಗೆಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಮಂಚಿಗ್ರಾಮದ ಮಣ್ಣಗುಳಿ ನಿವಾಸಿ ನಿತಿನ್ ಅವರಿಗೆ ಸೇರಿದ ಹೊಂಡಾ ಆಕ್ಟೀವಾ ಮೋಟಾರು ಸೈಕಲ್ ಕಾಣೆಯಾಗಿದೆ. ರಾಮಲ್ ಕಟ್ಟೆಯ ಅರಾಫ ಹಾಲ್ ನ ಹಿಂಬದಿಯಲ್ಲಿ ಮೋಟಾರು ಸೈಕಲ್ ನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದು, ಅದೇ ದಿನ ಸಂಜೆ 6.30 ಗಂಟೆಗೆ ವಾಪಾಸು ಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣೆಯಾಗಿದ್ದು, ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.