
48 ಗಂಟೆಗಳಲ್ಲಿ ಸೈಬರ್ ವಂಚಕನನ್ನು ಬಂಧಿಸಿದ ಪೊಲೀಸರು
ಮಂಗಳೂರು: ವಾಟ್ಸ್‌ಆಪ್‌ಗೆ ವಹನ್ ಪರಿವಹನ್.ಎಪಿಕೆ ಫೈಲ್ ಕಳುಹಿಸಿ ಆ ಮೂಲಕ ಲಕ್ಷಾಂತರ ರೂ. ವಂಚಿಸಿದ ಸೈಬರ್ ವಂಚಕನನ್ನು ಸೈಬರ್ ಇಕೋನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಸೌರ್ ದೆಹಲಿಯ ಪಂಚಶೀಲ ವಿಹಾರ್ ಮಾಳ್ವವಿಯಾ ನಗರದ ನಿವಾಸಿ ಗೌರವ್ ಮಕ್ವಾನ್ (25) ಎಂಬುವವನನ್ನು ಬಂಧಿಸಿದ್ದಾರೆ.
ದೂರುದಾರರಾದ ಯದುನಂದನ್ (27) ಅವರ ವಾಟ್ಸಾಪ್‌ಗೆ ವಹನ್ ಪರಿವಹನ್.ಎಪಿಕೆ ಫೈಲ್ ಬಂದಿದ್ದು, ಪಿರ್ಯಾಧಿದಾರರು ಸದ್ರಿ ವಹನ್ ಪರಿವಹನ್.ಎಪಿಕೆ ಫೈಲ್ ಡೌನ್ ಲೋಡ್ ಮಾಡುತ್ತಿದ್ದಂತೆ ಅವರ ಪ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಆಗಿದ್ದು, ಸೈಬರ್ ವಂಚಕರು ಪ್ಲಿಪ್ ಕಾರ್ಟ್ ಖಾತೆಯನ್ನು ಬಳಸಿಕೊಂಡು ದೂರುದಾರರ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ 1,31,000 ರೂ. ಮೌಲ್ಯದ ಎರಡು ಮೊಬೈಲ್ ಪೋನ್, 01 ಏರ್ ಪಾಡ್ ಹಾಗೂ ಗಿಫ್ಟ್ ವೋಚರ್‌ಗಳನ್ನು ಖರೀದಿ ಮಾಡಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡಿದ್ದು, ಪ್ಲಿಪ್ ಕಾರ್ಟ್ ಕಂಪನಿಯಿಂದ ಮಾಹಿತಿಯನ್ನು ಪಡೆದುಕೊಂಡು, ಪ್ರಕರಣ ದಾಖಲಾದ 48 ಗಂಟೆಯೊಳಗೆ ಸೆನ್ ಕ್ರೈಂ ಪೊಲೀಸ್ ಠಾಣಾ ಪಿಎಸ್‌ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾರೆಡ್ಡಿ ಅವರುಗಳು ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಬಂಧಿಸಿದ್ದಾರೆ.
ಬಂಧಿತನಿಂದ 2 ಅಂಡ್ರಾಯ್ಡ್ ಪೋನ್ ಸೇರಿದಂತೆ 5 ಐಪೋನ್, 02 ಏರ್ ಪ್ಯಾಡ್, ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಸೇರಿದಂತೆ ಒಟ್ಟು 4,00,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿತನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿತನಿಗೆ ನ್ಯಾಯಾಂಗ ಬಂಧನ ವಿದಿಸಿರುತ್ತದೆ.
ಕಾರ್ಯಾಚರಣೆಯು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ರವಿಶಂಕರ್ ಅವರ ಮಾರ್ಗದರ್ಶನದಂತೆ ಸೆನ್ ಠಾಣಾಧಿಕಾರಿ ಎಸಿಪಿ ರವೀಶ್ ನಾಯಕ್ ಅವರ ನೇತೃತ್ವದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಆರೋಪಿತರ ಪತ್ತೆ ಕಾರ್ಯಚರಣೆ ನಡೆಯುತ್ತಿದೆ.