ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲಿನ ಈಗಿನ ಮಾರ್ಗ ಹಾಗೂ ವೇಳಾಪಟ್ಟಿ ಬದಲಾವಣೆಗೆ ವಿರೋಧ

ಬೆಂಗಳೂರು-ಮೈಸೂರು-ಮುರುಡೇಶ್ವರ ರೈಲಿನ ಈಗಿನ ಮಾರ್ಗ ಹಾಗೂ ವೇಳಾಪಟ್ಟಿ ಬದಲಾವಣೆಗೆ ವಿರೋಧ

ಮಂಗಳೂರು: ಹಾಲಿ ಸಂಚಾರ ನೆಡಸುತ್ತಿರುವ ರೈಲು ಗಾಡಿ ಸಂಖ್ಯೆ 16585/86 ಬೆಂಗಳೂರು-ಮೈಸೂರು-ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಈಗಿನ ವೇಳಾಪಟ್ಟಿ ಅತ್ಯ೦ತ ಪ್ರಯಾಣಿಕರ ಸ್ನೇಹಿ ಆಗಿದ್ದು, ಮಂಗಳೂರು ಸೆಂಟ್ರಲ್ ಮುಖಾಂತರ ಓಡಾಟ ನೆಡಸುತ್ತಿರುವ ಕಾರಣ ಇದು ಈ ಭಾಗದ ಜನತೆಗೆ ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಹೋಗಿ ಬರಲು ಅತ್ಯಂತ ಅನುಕೂಲ ಆಗಿರುತ್ತದೆ. ಈ ರೈಲು ಗಾಡಿಯ ಈಗಿನ ವೇಳಾಪಟ್ಟಿ ಹಾಗೂ ಮಂಗಳೂರು ಸೆಂಟ್ರಲ್‌ಗೆ ಬರುತ್ತಿರುವ ಕಾರಣ ಹಲವಾರು ನಿತ್ಯ ಪ್ರಯಾಣಿಕರಿಗೆ ಬೆಳಿಗ್ಗೆ ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಬಂದು ಸಂಜೆ ಮರಳಿ ಹೋಗಲು ಅನುಕೂಲವಾದೆ.

ಈ ರೈಲಿನ ಈಗಿನ ವೇಳಾಪಟ್ಟಿ ಬದಲಾಯಿಸಿ ಮಂಗಳೂರು ಸೆಂಟ್ರಲ್‌ಗೆ ಬಾರದೇ ಮಂಗಳೂರು ಜಂಕ್ಷನ್ ಮುಖಾಂತರ ಮುರುಡೇಶ್ವರಕ್ಕೆ ಸಂಚರಿಸುವ ರೀತಿಯಲ್ಲಿ ಸಂಚಾರ ಮಾರ್ಪಾಡು ಮಾಡುವ ಬಗ್ಗೆ ಚಿಂತನೆ ನೆಡಲಾಗುತ್ತಿದೆ ಎಂದು ಮುದ್ರಣ, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ನೆಡೆಯುತ್ತಿರುವುದು ಗಮನಿಸಲಾಗಿದೆ. ಒಂದು ವೇಳೆ ಈ ಬದಲಾವಣೆ ಅನುಷ್ಠಾನಗೊಂಡರೇ, ಈ ಭಾಗದ ಜನತೆಗೆ ಅತ್ಯಂತ ತೊಂದರೆ ಆಗಲಿದೆ.

ಆದುದರಿಂದ ನಾವು ಈ ರೈಲು ಗಾಡಿಯ ಈಗಿನ ವೇಳಾಪಟ್ಟಿ ಬದಲಾವಣೆ ಮತ್ತು ಮಂಗಳೂರು ಸೆಂಟ್ರಲ್ ಬಾರದೇ ಮಂಗಳೂರು ಜಂಕ್ಷನ್ ಮುಖಾಂತರ ಸಂಚಾರ ನೆಡಸುವ ಯಾವುದೇ ಪ್ರಸ್ತಾವನೆ ಯನ್ನು ವಿರೊಧಿಸುತ್ತೇವೆ ಹಾಗೂ ಒಂದು ವೇಳೆ ಬದಲಾಯಿಸಲು ಮುಂದಾದರೆ ನಾವು ಹೋರಾಟ ಮಾಡುತ್ತೇವೆ. ಈಗಿನ ಸಂಚಾರ ಹಾಗೂ ವೇಳಾಪಟ್ಟಿ ಬದಲಾವಣೆ ಮಾಡದೇ ಮಂಗಳೂರು ಸೆಂಟ್ರಲ್ ಮುಖಾಂತರ ವಾಸ್ಕೋ ವರೆಗೆ ವಿಸ್ತರಿಸಲು ನಮ್ಮ ಆಕ್ಷೇಪ ಇಲ್ಲ.

ಈ ಬಗ್ಗೆ ಸಂಸದರಿಗೆ, ಕೇಂದ್ರ ರೈಲ್ವೆ ಅಧಿಕಾರಿಗಳಿಗೆ, ಕೇಂದ್ರ ರಾಜ್ಯ ಖಾತೆಯ ರೈಲು ಮಂತ್ರಿಗಳಿಗೆ ಹಾಗೂ ರೈಲ್ವೆ ಬೋರ್ಡ್ ಚೇರ್ಮೇನ್ ಅವರಿಗೆ ಮನವಿ ಸಲ್ಲಿಸಿ ಈ ರೈಲಿನ ಈಗಿನ ಮಾರ್ಗ ಹಾಗೂ ವೇಳಾಪಟ್ಟಿ ಬದಲಾವಣೆಗೆ ವಿರೋಧ ವ್ಯಕ್ತ ಪಡಿಸಿ ಈಗಿನ ವೇಳಾಪಟ್ಟಿ ಹಾಗೂ ಮಾರ್ಗವನ್ನು ಮುಂದುವರಿಸುವಂತೆ ಆಗ್ರಹಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article