ತೀವ್ರ ಮಳೆ: ಸ್ಥಿತಿಗತಿ ಪರಿಶೀಲಿಸಿದ ಸ್ಪೀಕರ್

ತೀವ್ರ ಮಳೆ: ಸ್ಥಿತಿಗತಿ ಪರಿಶೀಲಿಸಿದ ಸ್ಪೀಕರ್


ಮಂಗಳೂರು: ಜಿಲ್ಲೆಯಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ರೋಮ್ ನಿಂದ  ನೇರವಾಗಿ ಕಲ್ಲಿಕೋಟೆ ಮೂಲಕ ಮಂಗಳೂರಿಗೆ ಬಂದು ಜಿಲ್ಲೆಯ ಪ್ರಾಕೃತಿಕ ಸ್ಥಿತಿಗತಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯತ್ ನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಜಿಲ್ಲೆಯ ವಿವಿಧ ತಾಲೂಕು ಅಧಿಕಾರಿಗಳಿಂದ ವೀಡಿಯೋ ಸಂವಾದ ಮೂಲಕ ಪ್ರಾಕೃತಿಕ ವಿಕೋಪದ ಮಾಹಿತಿ ಪಡೆದರು.

ಗುಡ್ಡ ಸಮೀಪ ಮನೆಯಲ್ಲಿ ವಾಸ್ತವ್ಯದಲ್ಲಿರುವವರಿಗೆ ಮುಂದಿನ ಎರಡು ದಿನಗಳವರೆಗೆ ತಂಗದಂತೆ ತಿಳಿಸಬೇಕು. ರಸ್ತೆ, ವಿದ್ಯುತ್ ತೊಂದರೆಗಳನ್ನು ಎದುರಿಸಲು ಅಗತ್ಯ ಯಂತ್ರೋಪಕರಣಗಳೊಂದಿಗೆ ಸನ್ನದ್ಧರಾಗಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. 

 ಪ್ರಕೃತಿ ವಿಕೋಪ ತೀವ್ರವಾಗಿರುವುದರಿಂದ ರೆಸಾಟ್೯ ಗಳಿಗೆ ಬರುವ ಪ್ರವಾಸಿಗರಿಗೆ ವಾಸ್ತವ್ಯ ಹೂಡದಂತೆ ಮನವರಿಕೆ ಮಾಡಬೇಕು. ಒಂದು ವೇಳೆ ರೆಸಾಟ್೯ನಲ್ಲಿ ತಂಗಿ, ಪ್ರವಾಸಿಗರಿಗೆ ಯಾವುದೇ ಜೀವಹಾನಿಯಾದರೆ ಸಂಬಂಧಪಟ್ಟ ರೆಸಾಟ್೯ ಮಾಲೀಕರ ವಿರುಧ್ಧ ನಿದಾ೯ಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು  ಅವರು ಎಚ್ಚರಿಸಿದರು.

 ಸಭೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಓ ಡಾ. ಆನಂದ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮತ್ತಿತರರು ಇದ್ದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article