
ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ
ಸ್ವಾವಲಂಬಿ ಬದುಕಿಗೆ ಸಂಸ್ಥೆ ಪ್ರೇರಣೆ: ಕೆ.ಪಿ. ಸುಚರಿತ ಶೆಟ್ಟಿ
ಮೂಡುಬಿದಿರೆ: ವಿಶೇಷ ಸಾಮಥ್ಯ೯ವುಳ್ಳ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಂಸ್ಥೆಯು ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯ ಎಂದು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದರು.
ಅವರು ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ, ಭಿನ್ನ ಸಾಮರ್ಥ್ಯವುಳ್ಳವರ ತರಬೇತಿ ಶಾಲೆಗಳು ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಸಮಾಜ ಮಂದಿರದ ಸಭಾ ಭವನದಲ್ಲಿ ನಡೆದ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು, ಪೋಷಕರು ಹಾಗೂ ಶಿಕ್ಷಕರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿಶೇಷ ಮಕ್ಕಳ ಪೋಷಕರ ಶಕ್ತಿ ತಾಳ್ಮೆ ನಿಜಕ್ಕೂ ಮೆಚ್ಚತಕ್ಕದ್ದು. ಅವರಂತೆಯೇ ತರಬೇತಿ ಶಾಲೆಯ ಶಿಕ್ಷಕರು ತಮ್ಮದೇ ಮಕ್ಕಳೆಂಬ ಭಾವನೆಯಿಂದ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿರುವುದು ವಿಶೇಷ ಎಂದರು.
ಕಾರ್ಯಕ್ರಮವನ್ನು ಆದರ್ಶ ಆಡಳಿತ ಮಂಡಳಿಯ ಸದಸ್ಯ ಇಮಾನ್ಯುವೆಲ್ ಮೋನಿಸ್ ಉದ್ಘಾಟಿಸಿ ಮಾತನಾಡಿದ ಅವರು, ವಿಭಿನ್ನ ಸಮರ್ಚದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಂಸ್ಥೆ ಪ್ರಯತ್ನಿಸುತ್ತಿದೆ, ಪೋಷಕರು ಬೆಂಬಲಿಸುತ್ತಿದ್ದಾರೆ. ಸಮಸ್ಯೆಗಳನ್ನು ಹಂಚಿಕೊಂಡರೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಆದರ್ಶ ಆಡಳಿತ ಮಂಡಳಿಯ ಸದಸ್ಯೆ ಡಾ. ಶೆರ್ಲಿ ಟಿ. ಬಾಬು ಅವರು ಹಕ್ಕು ಮತ್ತು ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅರ್ಜುನ್ ಭಂಡಾರ್‌ಕಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸಾಧ್ಯವಿದ್ದಷ್ಟು ಎಲ್ಲ ರೀತಿಯ ಸಹಕಾರವನ್ನು ವಿಭಿನ್ನ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿಗಾಗಿ ವಿನಯೋಗಿಸುತ್ತಿದ್ದೇವೆ ಎಲ್ಲರೂ ಸಹಕರಿಸುತ್ತಿರುವುದರಿಂದಾಗಿ ಮಕ್ಕಳನ್ನು ಪೋಷಿಸಲು, ಪ್ರೇರೇಪಿಸಲು ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಬಿದಿರೆ ಥರ್ಡ್ (ಲೇಬರ್ ಶಾಲೆ)ಯಿಂದ ಜಾಗೃತಿ ಜಾಥಾ ನಡೆಯಿತು.
ಕುಶಾಲನಗರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಸಂಧ್ಯಾ ಮಾಂಟ್ರಾಡಿ, ಆದರ್ಶ ಸಂಸ್ಥೆಯ ನಿರ್ದೇಶಕ ಜೇಕಬ್ ವರ್ಗಿಸ್, ನವಚೇತನ ಸಂಸ್ಥೆಯ ವಸಂತಿ, ಉಪಸ್ಥಿತರಿದ್ದರು.
ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಲಕರಣೆ ವಿತರಣೆಯ ಪಟ್ಟಿಯನ್ನು ಜಯಂತಿ ಪ್ರಸ್ತುತಪಡಿಸಿದರು. ರವೀಂದ್ರ ನಾಯಕ್ ಸ್ವಾಗತಿಸಿದರು. ತುಷಾರ ಕಾರ್ಯಕ್ರಮ ನಿರ್ವಹಿಸಿ, ಜಯಶ್ರೀ ವಂದಿಸಿದರು.