
ನಗರಸಭಾಧ್ಯಕ್ಷೆಗೆ ಅಗೌರವ: ಆರೋಪಿ ಬಂಧನ
Monday, December 2, 2024
ಪುತ್ತೂರು: ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಕುರಿತು ಫೇಸ್‌ಬುಕ್‌ನಲ್ಲಿ ಮತ್ತು ವಾಟ್ಸಾಫ್‌ನಲ್ಲಿ ಅಗೌರವ ತರುವ ರೀತಿಯಲ್ಲಿ ಬರೆದು ವೈರಲ್ ಮಾಡಿರುವ ಆರೋಪಿ ಅದ್ದು ಪಡೀಲ್ ವಿರುದ್ಧ ದಲಿತ ದೌರ್ಜನ್ಯ, ಮಹಿಳಾ ದೌರ್ಜನ್ಯ ಹಾಗೂ ಸಾಮಾಜಿಕ ಜಾಲತಾಣ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರಠಾಣಾ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪುತ್ತೂರು ನಗರ ಸಭೆಯ ಅಧ್ಯಕ್ಷೆಯಾಗಿರುವ ಪ.ಜಾತಿಗೆ ಸೇರಿದ ನನ್ನ ಮೇಲೆ ಹಾಗೂ ನಗರ ಸಭೆಯನ್ನು ಅವಮಾನ ಮಾಡುವ ಮತ್ತು ಮಾನಹಾನಿಕರವಾಗಿ ಬರೆಯುತ್ತಿರುವ ಅದ್ದು ಪಡೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ನೀಡಿದ ದೂರಿನಂತೆತನ ಅದ್ದು ಪಡೀಲ್ ವಿರುದ್ಧ ನಗರ ಠಾಣಾ ಪೊಲೀಸರು ದಲಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತನನ್ನು ಬಂಧಿಸುವಂತೆ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಠಾಣೆಯ ಮುಂದೆ ಧರಣಿ ನಡೆಸಲಾಗಿತ್ತು.