ಜ.16 ರಂದು ಬಿ.ಸಿ. ರೋಡಿನಲ್ಲಿ ಯುವನಿಧಿ ಯೋಜನೆಯಲ್ಲಿ ಯುವಕ-ಯುವತಿಯರಿಗೆ ನೋಂದಾವಣೆ ಪ್ರಕ್ರಿಯೆ

ಜ.16 ರಂದು ಬಿ.ಸಿ. ರೋಡಿನಲ್ಲಿ ಯುವನಿಧಿ ಯೋಜನೆಯಲ್ಲಿ ಯುವಕ-ಯುವತಿಯರಿಗೆ ನೋಂದಾವಣೆ ಪ್ರಕ್ರಿಯೆ


ಬಂಟ್ವಾಳ: ಬಂಟ್ಚಾಳ ತಾಲೂಕಿನಲ್ಲಿ 2023-24ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೋಮ ಪೂರೈಸಿರುವ ನಿರುದ್ಯೋಗಿ ಯುವಕ-ಯುವತಿಯರಿಗೆ ನೋಂದಾವಣೆ ಪ್ರಕ್ರಿಯೆಯು ಜ.16 ರಂದು ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ತಾಲೂಕು ಪಂಚಾಯತ್‌ನ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆಯಲಿದೆ ಎಂದು ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರುದ್ಯೋಗಿ ಯುವಕ-ಯುವತಿಯರು ಇದರ ಸದುಪಯೋಗ ಪಡೆಯುವಂತೆ ಕೋರಿರುವ ಅವರು ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಗ್ರಾ.ಪಂ., ಪುರಸಭೆ, ಪ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನೋಂದಣಿಗೆ ಬಾಕಿರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಆಯೋಜಿಸಿದ್ದ ಈ ಶಿಬಿರ ರಾಜ್ಯಮಟ್ಟದಲ್ಲು ಗುರುತಿಸಿದೆ ಎಂದು ಅವರು ತಿಳಿಸಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ಬಂಟ್ವಾಳ ತಾಲೂಕಿನಲ್ಲಿ 2004 ಡಿಸೆಂಬರ್ ಅಂತ್ಯಕ್ಕೆ 70093 ಫಲಾನುಭವಿಗಳು ನೋಂದಾಯಿಸಿದ್ದು, ಇದರಲ್ಲಿ 67,388 ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಮೊತ್ತ ಜಮೆಯಾಗುತ್ತಿದ್ದು, 2024 ರ ಅಕ್ಟೋಬರ್ ವರೆಗಿನ ಮೊತ್ತ ಫಲಾನಭವಿಗಳ ಖಾತೆಗೆ ಜಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

498 ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಅರ್ಜಿಸಲ್ಲಿಕೆಗೆ ಬಾಕಿಇದ್ದು, 785 ಮಂದಿ ಆದಾಯ, 597 ಮಂದಿ ವಾಣಿಜ್ಯ ತೆರಿಗೆ ಪಾವತಿದಾರು ಅರ್ಜಿ ತಿರಸ್ಕೃತಗೊಂಡಿದೆ. ಅನ್ನಭಾಗ್ಯ ಯೋಜನೆಯಲ್ಲಿ 3,736 ಅಂತ್ಯೋದಯ, 50,007 ಮದಿ ಬಿಪಿಎಲ್ ಪಡಿತರ ಫಲಾನುಭವಿಗಳಿದ್ದು, ಇದುವರೆಗೆ 10,003,18,700 ರೂ.ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಯುವನಿಧಿ ತೋಜನೆಯಲ್ಲಿ 857 ಮಂದಿ ನೋಂದಾವಣೆ ಮಾಡಿದ್ದು, 95,59,500 ರೂ. ಪಾವತಿಸಲಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ 103317 ಮಂದಿ ಬಳಕೆದಾರರಿದ್ದು, 9230 ಆರ್ಹಫಲಾನುಭವಿಗಳ ಪೈಕಿ, 9113 ಮಂದಿ ನೋಂದಾವಣೆಯಾಗಿದ್ದು, 2023-24 ಹಾಗೂ 2024-25 ಸೇರಿ ಒಟ್ಟು 98.48 ಲಕ್ಷ ರೂ. ಪಾವತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಜಯಂತಿ ಪೂಜಾರಿ ತಿಳಿಸಿದ್ದಾರೆ.

ಧರ್ಮಸ್ಥಳ-ಮಂಗಳೂರು, ಉಪ್ಪಿನಂಗಡಿ-ಮಂಗಳೂರು ನಡುವೆ ಸಂಚರಿಸುವ ಸರಕಾರಿ ಬಸ್ ನಿಗದಿತ ಬಸ್ ತಂಗುದಾಣದಲ್ಲಿ ನಿಲುಗಡೆಯಾಗದೆ ಶಾಲಾಮಕ್ಕಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಬಗ್ಗೆ ಬಂದ ದೂರಿನ ಹಿನ್ನಲೆಯಲ್ಲಿ ಸಮಿತಿ ಸಭೆಗೆ ಕೆಎಸ್‌ಆರ್‌ಟಿಸಿಯ ಮಂಗಳೂರು ಡಿಪ್ಪೋ ಪ್ರತಿನಿಧಿ ಹಾಜರಾಗಿ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಭರವಸೆ ನೀಡಿದ್ದು, ಇದೀಗ ಸಾರ್ವಜನಿಕರಿಗೆ ಅನುಕೂಲವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article