
ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಬೈಕ್ ಕಳವು
Saturday, January 4, 2025
ಬಂಟ್ವಾಳ: ಪೊಲೀಸ್ ವಸತಿ ನಿಲಯದ ಸಮೀಪವೇ ನಿಲ್ಲಿಸಲಾಗಿದ್ದ ಪೊಲೀಸ್ ಸಿಬ್ಬಂದಿಯೋರ್ವರ ಬೈಕ್ ಕಾಣೆಯಾಗಿದೆ.
ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಅವಿನಾಶ್ ಎಂಬವರ ದ್ವಿಚಕ್ರ ವಾಹನ ಕಾಣೆಯಾಗಿದೆ.
ಬಿ.ಸಿ. ರೋಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿಯಿರುವ ಪೊಲೀಸ್ ವಸತಿಗೃಹದ ಹಿಂಬದಿಯಲ್ಲಿ ಮಧ್ಯಾಹ್ನ ಬೈಕ್ ನಿಲ್ಲಿಸಲಾಗಿದ್ದು, ಸಂಜೆ ನಾಲ್ಕು ಗಂಟೆ ವೇಳೆಗೆ ವಾಪಾಸ್ ಬಂದಾಗ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಕಾಣೆಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.