
ಬ್ರಹ್ಮಕುಮಾರಿ ಸಂಸ್ಥೆಯಲ್ಲಿ ನೃತ್ಯ ಕಲಾವಿದರಿಗೆ ಸ್ನೇಹಮಿಲನ ನೃತ್ಯ ರಂಗ ಪುರಸ್ಕಾರ
ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಮಂಗಳೂರು ವತಿಯಿಂದ ಉರ್ವಾಸ್ಟೋರ್‌ನಲ್ಲಿರುವ ಬ್ರಹ್ಮಕುಮಾರೀಸ್ ಸಭಾಂಗಣದಲ್ಲಿ ಜ.26 ರಂದು ಸಂಜೆ ನೃತ್ಯ ರಂಗದಲ್ಲಿ ಸಾಧನೆಗೈದ ಸುಮಾರು 20 ನೃತ್ಯ ಕಲಾಸಾಧಕರಿಗೆ ‘ಸ್ನೇಹ ಮಿಲನ ನೃತ್ಯ ರಂಗ ಪುರಸ್ಕಾರ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಮತ್ತು ಶಾಂತಲಾ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಮಂಗಳೂರಿನ ಎಲ್ಲಾ ನೃತ್ಯ ಕುಟುಂಬವನ್ನು ಒಂದೇ ಸ್ಥಳದಲ್ಲಿ ಸೇರಿಸಿ ಸನ್ಮಾನ ಮಾಡಿದ ಸಂಸ್ಥೆಯ ಈ ಅಮೋಘ ಕಾರ್ಯವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ ಟಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್ ನ ನಿರ್ದೇಶಕಿ, ಕರ್ನಾಟಕ ಕಲಾಶ್ರಿ ವಿದುಷಿ ನಯನ ವಿ. ರೈ, ಕುದ್ ಕಾಡಿ, ಮಂಗಳೂರಿನ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಭಾಗವಹಿಸಿ, ಬ್ರಹ್ಮಾಕುಮಾರಿ, ಮುಖ್ಯಾಲಯ ಮೌಂಟ್ ಆಟು ರಾಜಸ್ಥಾನಕ್ಕೆ ಹೋದಾಗಿನ ತಮ್ಮ ಅನುಭವ ಹಂಚಿಕೊಂಡರು.
ಈಶ್ವರೀಯ ಸಂದೇಶವನ್ನು ಮಂಗಳೂರಿನ ಬ್ರಹ್ಮಾಕುಮಾರೀಸ್ ಸಂಚಾಲಕಿ ಬ್ರಹ್ಮಕುಮಾರಿ ವಿಶ್ವೇಶ್ವರಿ ನೀಡಿದರು. ಬಿಕೆ ಜಯಾ ಸ್ವಾಗತಿಸಿದರು. ಬಿಕೆ ರೇವತಿ ಸಂಸ್ಥೆ ಪರಿಚಯವನ್ನು ಮಾಡಿದರು. ಕಾರ್ಯಕ್ರಮವನ್ನು ಬಿಕೆ ಸ್ನೇಹ ನಿರೂಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ಗೀತಾ ಸರಳಯ, ಕರ್ನಾಟಕ ಕಲಾ ವಿದುಷಿ ರಾಜಶ್ರೀ ಉಳ್ಳಾಲ್, ಕರ್ನಾಟಕ ಕಲಾಶ್ರಿ ವಿದುಷಿ ಸುಲೋಚನ ವಿ. ಭಟ್, ಕರ್ನಾಟಕ ಕಲಾಶ್ರೀ ವಿದ್ವಾನ್ ಕೆ. ಚಂದ್ರಶೇಖರ ನಾವಡ, ನೃತ್ಯ ಗುರು ವಿದ್ವಾನ್ ಯು.ಕೆ. ಪ್ರವೀಣ್, ನಾಟ್ಯ ಕಲಾರತ್ನ ವಿದ್ವಾನ್ ಸುರೇಶ್ ಅತ್ತಾವರ, ಗುರು ಬಾಲಕೃಷ್ಣ, ವಿ. ಮಂಜೇಶ್ವರ, ಗುರು ಸುಮಂಗಲಾ ರತ್ನಾಕರ್ ರಾವ್, ವಿದುಷಿ ವಿನಯ ರಾವ್, ವಿದುಷಿ ಡಾ. ಶ್ರೀವಿದ್ಯಾ ಮುರಲೀಧರ್, ವಿದುಷಿ ಶ್ರೀಲತಾ ನಾಗರಾಜ್, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ವಿದುಷಿ ರಾಧಿಕಾ ಶೆಟ್ಟಿ, ವಿದುಷಿ ಅನ್ನಪೂರ್ಣ ರಿತೇಶ್, ವಿದ್ಯಾನ್ ಕುಮಾರ್ ಮನೋಜ್ ಗಣೇಶ್‌ಪುರಿ, ವಿದುಷಿ ರಮ್ಯಾಚಂದ್ರ, ವಿದುಷಿ ಧನ್ಯಶ್ರೀ ಡಿ. ಭಟ್, ವಿದುಷಿ ವೈಷ್ಣವಿ ಪ್ರಭು, ಕುಮಾರ್ ಶ್ರೀಜಿತ್ ಶೆಟಿ, ವೈಷ್ಣವಿ ಅವರುಗಳನ್ನು ನೃತ್ಯ ರಂಗ ಪುರಸ್ಕಾರ ನೀಡಿ ಗೌರವಿಸಲಾಯಿತು.