
ಮಾನವೀಯ ಸೇವೆಗೆ ಸ್ವಾಮಿ ವಿವೇಕಾನಂದರ ಸಂದೇಶ ಸ್ಪೂರ್ತಿ: ಶಾಸಕ ಕಾಮತ್
ಮಂಗಳೂರು: ಮಾನವೀಯ ಸೇವೆಯಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಯುವ ಜನತೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಸ್ಪೂರ್ತಿಯಾಗಿದೆ ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕ, ಯೂತ್ ರೆಡ್‌ಕ್ರಾಸ್ ಮಂಗಳೂರು ವಿ.ವಿ. ಮತ್ತು ಯೇನೆಪೊಯ ಪರಿಗಣಿತ ವಿ.ವಿ. ವತಿಯಿಂದ ನಗರದ ವಿ.ವಿ. ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ಭಾನುವಾರ ನಡೆದ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ-25 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸೇವೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪ್ರತಿಯೊಬ್ಬರು ರಕ್ತದಾನ ಮಾಡುವ ಸಂಕಲ್ಪ ತಳೆದು ರೆಡ್‌ಕ್ರಾಸ್ ಸಂಸ್ಥೆಯ ಮಾನವೀಯ ಕಾರ್ಯಗಳಿಗೆ ನೆರವಾಗಬೇಕು ಎಂದು ಶಾಸಕ ಕಾಮತ್ ಹೇಳಿದರು.
ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ.ಯ ಹಣಕಾಸು ಅಧಿಕಾರಿ ಪ್ರೊ. ವೈ. ಸಂಗಪ್ಪ, ಯೇನೆಪೊಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ ಛಾತ್ರ, ಮಂಗಳೂರು ವಿ.ವಿ. ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರೆಡ್‌ಕ್ರಾಸ್ ಜಿಲ್ಲಾ ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕರಾದ ಗುರುದತ್ ಕಾಮತ್, ಡಾ. ಸುಮನಾ ಬೋಳಾರ್, ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ಮಟ್ಟದ ಯೂತ್ ರೆಡ್‌ಕ್ರಾಸ್ ಪ್ರಶಸ್ತಿಗಳನ್ನು ವಿತರಿಸಲಾಯಿತು.
ಮಂಗಳೂರು ವಿ.ವಿ. ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಅಮೀನ್ ಪ್ರಶಸ್ತಿ ವಿಜೇತರ ವಿವರ ನೀಡಿದರು. ರೆಡ್‌ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ ಸ್ವಾಗತಿಸಿ, ಯುವ ರೆಡ್‌ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ ವಂದಿಸಿದರು. ಪಾದುವ ಕಾಲೇಜಿನ ವಿದ್ಯಾರ್ಥಿನಿ ಜೆನಿಷಾ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ವಿ.ವಿ. ಮಟ್ಟದ ಪ್ರಶಸ್ತಿ:
ಉತ್ತಮ ಯೂತ್ ರೆಡ್‌ಕ್ರಾಸ್ ಘಟಕ:
1.ಬೆಸೆಂಟ್ ಮಹಿಳಾ ಕಾಲೇಜು ಮಂಗಳೂರು ಮತ್ತು ಯೇನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಮುಡಿಪು,
2.ಪಾದುವಾ ಕಾಲೇಜು ಮಂಗಳೂರು, 3.ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪುಂಜಾಲಕಟ್ಟೆ.
*ಉತ್ತಮ ಯೂತ್ ರೆಡ್‌ಕ್ರಾಸ್ ಯೋಜನಾಧಿಕಾರಿ:
1.ದೀಕ್ಷಿತಾ, ಬೆಸೆಂಟ್ ಕಾಲೇಜು ಮತ್ತು ಅಕ್ಷತಾ ಯೇನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್ 2.ರೋಶನ್ ವಿನ್ಸಿ ಸಾಂತುಮಯರ್, ಪಾದುವಾ ಕಾಲೇಜು, 3. ಡಾ. ವೈಶಾಲಿ, ಸರ್ಕಾರಿ ಕಾಲೇಜು ಪುಂಜಾಲಕಟ್ಟೆ.
*ಸರ್ಟಿಫಿಕೆಟ್ ಆಫ್ ಎಕ್ಸ್‌ಲೆನ್ಸ್ (ಇಂಟರ್ನ್‌ಶಿಪ್): 1.ಯೇನೆಪೊಯ ಸ್ಕೂಲ್ ಆಫ್ ಅಲೈಡ್ ಹೆಲ್ತ್ ಸೈನ್ಸ್, 2. ಬೆಸೆಂಟ್ ಕಾಲೇಜು, 3. ಗೋಕರ್ಣನಾಥೇಶ್ವರ ಕಾಲೇಜು, ರೋಶನಿ ನಿಲಯ ಮತ್ತು ಯೇನೆಪೊಯ ಫಿಸಿಯೋಥೆರಪಿ ಕಾಲೇಜು ಮುಡಿಪು.
*ಉತ್ತಮ ಸ್ವಯಂಸೇವಕರು:
ಸನಾ (ಬೆಸೆಂಟ್ ಕಾಲೇಜು), ಎಂ. ಸಿನಾನ್ (ಪಾದುವಾ ಕಾಲೇಜು), ಸುನೈನಾ (ಸರ್ಕಾರಿ ಕಾಲೇಜು ಪುಂಜಾಲಕಟ್ಟೆ), ದಿವ್ಯ ದೇವಾಡಿಗ (ಸರ್ಕಾರಿ ಕಾಲೇಜು, ಕಾರ್ಕಳ) ಮತ್ತು ರಮೇಶ್ ಪ್ರಹ್ಲಾದ್ (ಗೋಕರ್ಣನಾಥೇಶ್ವರ ಕಾಲೇಜು)