
ಮಂಗಳೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ವಿನಯ ಕುಮಾರ್ ಸೂರಿಂಜೆ ಆಯ್ಕೆ
Monday, January 13, 2025
ಮಂಗಳೂರು: ಮಂಗಳೂರು ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ಬ್ಯಾಂಕ್) ಇದರ ಅಧ್ಯಕ್ಷರಾಗಿ ವಿನಯ ಕುಮಾರ್ ಸೂರಿಂಜೆ ಅವರು ಉಪಾಧ್ಯಕ್ಷರಾಗಿ ಸೀತಾರಾಮ ಶೆಟ್ಟಿ ಅವರು ಅವಿರೋಧವಾಗಿ ಜನವರಿ 11ರಂದು ಆಯ್ಕೆಯಾಗಿದ್ದಾರೆ.
ವಿನಯಕುಮಾರ್ ಸೂರಿಂಜೆ ಅವರು ಕಳೆದ ಎರಡು ಅವಧಿಗೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿದ್ದು, ಇದೀಗ ಮೂರನೇ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆ ಆಯ್ಕೆಗೊಂಡಿರುತ್ತಾರೆ.
ನಿರ್ದೇಶಕರ ಆಯ್ಕೆ:
ಆಡಳಿತ ಮಂಡಳಿಯ ನಿರ್ದೆಶಕರ ಚುನಾವಣೆ ಇತ್ತಿಚೇಗೆ ನಡೆದಿದ್ದು ವಿನಯ ಕುಮಾರ್ ಸೂರಿಂಜೆ, ಸೀತಾರಾಮ ಶೆಟ್ಟಿ, ರೋಹಿಣಿ ಜೆ. ಅಮೀನ್, ಜೋಸೆಫಿನ್ ಡಿ’ಸೋಜಾ, ಬಿ. ರಘುನಾಥ ಪಂಡಿತ್, ಶಾಂತಿಪ್ರಸಾದ್ ಹೆಗ್ಡೆ, ನಾಗರಾಜ ರಾವ್, ಯಶವಂತ ವಿ. ಶೆಟ್ಟಿ, ಪ್ರದೀಪ್ ಕುಮಾರ್, ದಿನೇಶ್ ನಾಯ್ಕ, ಹರಿಪ್ರಸಾದ್ ಜಿ. ಶೆಟ್ಟಿ, ಮೋಹನದಾಸ್ ಸುವರ್ಣ, ನವೀನ್ ಭಂಡಾರಿ ಹಾಗೂ ಸುಂದರ ಇವರುಗಳು ಆಡಳಿತ ಮಂಡಳಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಎಸ್.ಎಂ. ರಘು, ಸಹಕಾರ ಸಂಘಗಳ ಸಹಾಯಕ ನಿಬಂದಕರು, ಪುತ್ತೂರು ಉಪ-ವಿಭಾಗ ಇವರು ರಿಟರ್ನಿಂಗ್ ಅಧಿಕಾರಿಯಾಗಿ ಚುನಾವಣೆಯನ್ನು ನಡೆಸಿಕೊಟ್ಟಿರುತ್ತಾರೆ.