
ರಥಬೀದಿ ಕಾಲೇಜಿನಲ್ಲಿ ‘ದಿಶಾ’ ವಿದ್ಯಾರ್ಥಿವೇತನ ವಿತರಣೆ
Saturday, January 4, 2025
ವಿದ್ಯಾರ್ಥಿಗಳಿಗೆ ದೊರೆತ ವಿದ್ಯಾರ್ಥಿವೇತನವನ್ನು ಉಪಯೋಗಿಸಿಕೊಂಡು ಸಾಧನೆ ಮಾಡಬೇಕು: ಸವಿಸ್ತಾರ್ ಆಳ್ವ
ಮಂಗಳೂರು: ವಿದ್ಯಾರ್ಥಿಗಳು ತಮಗೆ ದೊರೆಯುವ ವಿದ್ಯಾರ್ಥಿವೇತನವನ್ನು ಸದುಪಯೋಗ ಮಾಡಿಕೊಂಡು ಶೈಕ್ಷಣಿಕ ಸಾಧನೆ ಮಾಡಲು ಪ್ರಯತ್ನ ಪಡಬೇಕು ಎಂದು ಅಲ್‌ಕಾರ್ಗೋ ಸಂಸ್ಥೆಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಗಳ ಸಂಯೋಜಕ ಸವಿಸ್ತಾರ್ ಆಳ್ವ ಹೇಳಿದರು.
ಅವರು ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಲ್‌ಕಾರ್ಗೋ ಸಂಸ್ಥೆಯ ‘ಅವಶ್ಯ ಪ್ರತಿಷ್ಠಾನ’ದ ವತಿಯಿಂದ ಕೊಡಮಾಡಿದ ‘ದಿಶಾ’ ವಿದ್ಯಾರ್ಥಿವೇತನವನ್ನು ವಿತರಿಸಿ ಮಾತನಾಡಿದರು.
ವಿವಿಧ ಸ್ನಾತಕ ಪದವಿಗಳ ಒಟ್ಟು ನಲ್ವತ್ತು ಪ್ರತಿಭಾನ್ವಿತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ತಲಾ ನಾಲ್ಕು ಸಾವಿರಗಳಂತೆ ಒಟ್ಟು 1.60 ಲಕ್ಷ ರೂ.ಗಳ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯಕರ ಭಂಡಾರಿ ಎಂ. ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ, ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಸಂಯೋಜಕಿ ಮೋಹಿನಿ, ಕಚೇರಿ ಸಿಬ್ಬಂದಿ ರೂಪಾ ನಾಯಕ್, ಫಲಾನುಭವಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.