
ಪೊಲೀಸರು ಎಲ್ಲವನ್ನು ಪತ್ತೆ ಹಚ್ಚಲಿದ್ದಾರೆ: ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಹ್ ದರೋಡೆ ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ, ಅತೀ ಶೀಘ್ರದಲ್ಲೇ ಪೊಲೀಸರು ಈ ದರೋಡೆ ಪ್ರಕರಣವನ್ನು ಭೇದಿಸಿದ್ದಾರೆ ಇಂತಹ ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು ಇಂತಹ ಪ್ರಕರಣಗಳನ್ನ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸೋದು ಸರ್ಕಾರದ ಕರ್ತವ್ಯ, ಈ ಪ್ರಕರಣವನ್ನ ಕೇವಲ ನಾಲ್ಕು ದಿನದಲ್ಲಿ ಭೇದಿಸಿ ಎಲ್ಲಾ ಚಿನ್ನಾಭರಣವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ, ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು, ಸುರಕ್ಷತೆಯ ಬಗ್ಗೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಸುರಕ್ಷತೆಯ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ? ಹಿಂದಿರುವವರು ಯಾರು? ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು.
ಮಸಾಜ್ ಪಾರ್ಲರ್ ಪ್ರಕರಣ:
ಮಸಾಜ್ ಪಾರ್ಲರ್ ಮೇಲೆ ರಾಮ ಸೇನೆ ಕಾರ್ಯಕರ್ತರ ದಾಳಿ ಬಗ್ಗೆ ಆಕ್ರೋಷ ವ್ಯಕ್ತಪಡಿಸಿದ ಸಚಿವರು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು, ಏನಾದ್ರು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು, ಈ ರೀತಿ ಗೂಂಡಾಗಿರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರೋದು ಸರಿಯಲ್ಲ, ಈ ರೀತಿಯ ಘಟನೆಗಳು ನಡೆದಾಗ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಬರುವವರ ಮೇಲೆ ಪರಿಣಾಮ ಬೀಳಿತ್ತದೆ, ಬಂಡವಾಳ ಹೂಡುವವರು ಇಲ್ಲಿ ಸುರಕ್ಷತೆ ಇದೆಯಾ? ಎಂದು ಕೇಳುತ್ತಾರೆ, ಇತ್ತೀಚೆಗೆ ಬೆಂಗಳೂರಿಗೆ ಬಂದ ಬಂಡವಾಳ ಹೂಡಿಕೆದಾರರು ಕೇಳಿದ್ದ ಒಂದೇ ಪ್ರಶ್ನೆ ಇಲ್ಲಿ ಸುರಕ್ಷತೆ ಇದೆಯಾ? ಎಂದು, ರಾಮ್ ಸೇನೆ ಇರಲಿ ಶ್ರೀರಾಮ ಸೇನೆ ಇರಲಿ ಈ ರೀತಿ ಮಾಡೋದು ಖಂಡಿತ ಸರಿಯಲ್ಲ, ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಆಗುತ್ತೆ, ಇಂತವರ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅವಶ್ಯಕತೆ ಇದೆ, ಕೆಲವರು ಈ ಘಟನೆಯನ್ನು ಇನ್ನೂ ಖಂಡಿಸಿಲ್ಲ ಎಂದರು.
ಸಿಎಂ ಬದಲಾವಣೆ:
ಮುಖ್ಯಮಂತ್ರಿ ಬದಲಾವಣೆ ವಿಚಾರ ಕುರಿತಂತೆ ಮಾತನಾಡಿ ಇದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ, ಒಬ್ಬರು ಸಿಎಂ ಇರುವಾಗ ಇನ್ನೊಬ್ಬರು ಸಿಎಂ ಆಗುವ ಪ್ರಶ್ನೆ ಬರೋದಿಲ್ಲ, ಈ ಬಗ್ಗೆ ಏನೇ ಇದ್ರೂ ವರಿಷ್ಠರು ತೀರ್ಮಾನ ತಗೋತಾರೆ, ಸಿದ್ದರಾಮಯ್ಯ ಎಲ್ಲರಿಗೂ 100% ಪರ್ಸೆಂಟ್ ವಿಶ್ವಾಸ ಇರೋ ನಾಯಕ ಎಂದರು.
ದೇಶದಲ್ಲಿ ಯಾವುದೇ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿಲ್ಲ, ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡು ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಿದೆ, ಎಷ್ಟೇ ಜನ ಟೀಕೆಗಳು ಮಾಡಿದ್ರೂ,ನಾವು ನಮ್ಮ ಬದ್ಧತೆಯನ್ನ ತೋರಿಸಿದ್ದೇವೆ, ಹೇಗ್ರಿ ಈ ಗ್ಯಾರಂಟಿಗಳನ್ನ ಅಷ್ಟು ಬೇಗ ಜಾರಿಗೆ ತಂದ್ರಿ ಎಂದು ಕೇಂದ್ರ ಸರ್ಕಾರದವರೇ ಕೇಳಿದ್ದಾರೆ ಎಂದರು.