
ಅಮೃತ ಮಹೋತ್ಸವ ಸಂಭ್ರಮದ ಲಾಂಛನ ಬಿಡುಗಡೆ
Wednesday, January 15, 2025
ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ), ಮೂಡುಬಿದಿರೆ ಇದರ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ–2025 ಲಾಂಛನ ಬಿಡುಗಡೆ ಮತ್ತು “ಬಾಲ ಸಂಸ್ಕಾರ' ವಿಶೇಷ ಕಾರ್ಯಕ್ರಮವು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಮಂಗಳವಾರ ಸಂಜೆ ನಡೆಯಿತು.
ಉದ್ಯಮಿ ನಾರಾಯಣ ಪಿ.ಎಂ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಕುಚಿತ ಮನೋಭಾವವನ್ನು ಬಿಟ್ಟು ಎಲ್ಲರೂ ಒಟ್ಟುಗೂಡಿ ಅಮೃತ ಮಹೋತ್ಸವ ಕಾರ್ಯಕ್ರಮ ವನ್ನು ನಡೆಸುವಂತೆ ಮಾರ್ಗದರ್ಶನ ಮಾಡಿದರು.
ಪ್ರಸೂತಿ ತಜ್ಞ ಡಾ. ರಮೇಶ್ ಅಮೃತ ಮಹೋತ್ಸವ ಲಾಂಛನ ಬಿಡುಗಡೆ ಮಾಡಿ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ ಪೂಜಾರಿ ಅಧ್ಯಕ್ಷತೆ ವಹಿಸಿದರು.
ಸ್ಥಾಪಕ ಸದಸ್ಯ ಪಿ.ಕೆ. ರಾಜು ಪೂಜಾರಿ, ಅಮೃತ ಮಹೋತ್ಸವ ಸಂಭ್ರಮದ ಲಾಂಛನ ಬಿಡುಗಡೆ ಮಾಡಿದರು.
ಸ್ಥಾಪಕ ಸದಸ್ಯ ಪಿ.ಕೆ. ರಾಜು ಪೂಜಾರಿ, ಬೆಳ್ತಂಗಡಿ ಗುರುದೇವ ವಿವಿದ್ದೋದ್ದೇಶ ಸಹಕಾರ ಸಂಘದ ನಿರ್ದೇಶಕ ಜಗದೀಶ್ವಂದ್ರ ಡಿ. ಕೆ, ಅಧ್ಯಾಪಿಕೆ ಉಷಾ ಮಧುಕರ್, ಸೇವಾದಳದ ಅಧ್ಯಕ್ಷ ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಿರೀಶ್ ಕುಮಾರ್ ಸ್ವಾಗತಿಸಿದರು. ಲಕ್ಷಣ್ ಪೂಜಾರಿ ವಂದಿಸಿದರು. ಶ್ರೀರಾಜ್ ಸನಿಲ್ ಹಾಗೂ ಪ್ರಜ್ವಲ್ ಮಾರ್ನಾಡು ಕಾಯ೯ಕ್ರಮ, ನಿರೂಪಿಸಿದರು.