
ಎಕ್ಸಲೆಂಟ್ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ
Wednesday, January 22, 2025
ಮೂಡುಬಿದಿರೆ: ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ರಸ್ತೆ ಸುರಕ್ಷತಾ ಅಭಿಯಾನವು ಮೂಡುಬಿದಿರೆ ಪೊಲೀಸರ ಸಹಕಾರದೊಂದಿಗೆ ನಡೆಯಿತು.
ಪೊಲೀಸ್ ಪ್ರದೀಪ್ ಕುಮಾರ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ವಾಹನದೊಂದಿಗೆ ರಸ್ತೆಗೆ ಇಳಿಯುವ ಮೊದಲು ಅನುಮೋದಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆ ಸುರಕ್ಷತಾ ಸಂವೇದನೆ ಅತ್ಯಗತ್ಯ ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಸಾವ೯ಜನಿಕರಿಗೆ ಅರಿವು ಮೂಡಿಸುವುದರಿಂದ ಪ್ರತಿನಿತ್ಯ ಸಂಭವಿಸುವಾಗ ಅಪಘಾತಗಳು ಮತ್ತು ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದ ಅವರು ಮಕ್ಕಳಿಗೆ ರಸ್ತೆ ಸುರಕ್ಷತೆಯ ಪ್ರಾಮುಖ್ಯತೆ ಮತ್ತೆ ನಿಯಮವನ್ನು ತಿಳಿಸಿದರು.
ಮಹಿಳಾ ಪೊಲೀಸ್ ಮಂಜುಳಾ ಅವರು ಮಾತನಾಡಿ, 18 ವಷ೯ ತುಂಬಿದ ನಂತರ ವಾಹನ ಪರವಾನಗಿ ಪಡೆದು ಗಾಡಿ ಓಡಿಸಬೇಕು ದ್ವಿಚಕ್ರ ವಾಹನದವರು ಕಡ್ಡಾಯ ಹೆಲ್ಮೆಟ್ ಧರಿಸಬೇಕು, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕಬೇಕು ಎಂದು ಮಾಹಿತಿ ನೀಡಿದರು.
ರಸ್ತೆ ಸುರಕ್ಷತಾ ರ‍್ಯಾಲಿಯು ಮೂಡುಬಿದಿರೆ ಪೊಲೀಸರು, ಶಿಕ್ಷಕ ಭಾಸ್ಕರ್ ನೆಲ್ಯಾಡಿ ಮತ್ತು ಶ್ರೀದೇವಿ ಜೈನ್ ಸಂದ್ಯಾ ಶೇರಿಗಾರ್ ಅವರ ಮಾಗ೯ದಶ೯ನದಲ್ಲಿ ನಡೆಯಿತು.
ಶಿಕ್ಷಕ ನವೀನ್ ಎ. ಕಾಯ೯ಕ್ರಮ ನಿರೂಪಿಸಿದರು. ಚಂದ್ರಪ್ಪ ಸ್ವಾಗತಿಸಿ, ಮಮತಾ ಗಣೇಶ್ ವಂದಿಸಿದರು.