ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಅದರ ಸದ್ಬಳಕೆ’ ತಾಂತ್ರಿಕ ಉಪನ್ಯಾಸ

ಸಂತ ಫಿಲೋಮಿನಾ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಅದರ ಸದ್ಬಳಕೆ’ ತಾಂತ್ರಿಕ ಉಪನ್ಯಾಸ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗ ಹಾಗೂ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಎಂಸಿಎ ಹಾಗೂ ಎಂಕಾಂ ವಿದ್ಯಾರ್ಥಿಗಳಿಗೆ ‘ಕೃತಕ ಬುದ್ಧಿಮತ್ತೆ ಮತ್ತು ಅರದ ಸದ್ಬಳಕೆ’ ಎಂಬ ವಿಷಯದ ಮೇಲೆ ತಾಂತ್ರಿಕ ಉಪನ್ಯಾಸ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಂಶುಪಾಲ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ‘ಮಾನವನ ಅಸಾಧಾರಣ ಬುದ್ಧಿವಂತಿಕೆಯ ಫಲವೇ ಕೃತಕ ಬುದ್ಧಿಮತ್ತೆ. ಇಂದುಕೃತಕ ಬುದ್ಧಿಮತ್ತೆಯು ಉದ್ಯಮಗಳನ್ನು ರೂಪಾಂತರಗೊಳಿಸುತ್ತಿದೆ. ಮಾನವನ ಅಪ್ರತಿಮ ಚಿಂತನಾಶಕ್ತಿಗೆ ಸಾಕ್ಷಿಯಾಗಿದೆ. ಹಿಂದಿನ ಕಾಲದಲ್ಲಿ ಈ ರೀತಿಯ ಪರಿಕಲ್ಪನೆಗಳು ಕೇವಲ ಚಲನಚಿತ್ರಗಳಲ್ಲಿ ಮಾತ್ರ ಕಂಡುಬರುತ್ತಿದ್ದುವು. ಆದರೆ ಈಗ ಅದು ಕೇವಲ ಪರಿಕಲ್ಪನೆಯಲ್ಲ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಶಿಕ್ಷಣ, ಆಡಳಿತ, ಆರೋಗ್ಯ, ವಾಣಿಜ್ಯ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಆದರೆ ಸಮಾಜದ ಮೇಲೆ ಅದರಿಂದಾದ ದುಷ್ಪರಿಣಾಮಗಳನ್ನು ಅಲ್ಲಗಳೆಯುವಂತಿಲ್ಲ. ನೈತಿಕತೆ, ಹೊಣೆಗಾರಿಕೆ ಮತ್ತು ಮಾನವ ಹಕ್ಕುಗಳ ಗೌರವಕ್ಕೆ ಆದ್ಯತೆ ನೀಡುವ ಮೂಲಕ ನಾವು ಕೃತಕ ಬುದ್ಧಿಮತ್ತೆಯನ್ನು    ಒಳ್ಳೆಯದಕ್ಕಾಗಿ ಬಳಸಿಕೊಳ್ಳಬಹುದು ಎಂದು ಹೇಳಿ ವಿದ್ಯಾರ್ಥಿಳಿಗೆ ಕೃತಕ ಬುದ್ಧಿಮತ್ತೆಯ ಅವಿಷ್ಕಾರಗಳ ಸದ್ಬಳಕೆ ಮಾಡುವಂತೆ ಕರೆ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿದ ಶ್ರೀನಿವಾಸ ವಿಶ್ವಿವಿದ್ಯಾನಿಲಯದ ಸೈಬರ್ ಸಿಕ್ಯುರಿಟಿ ಹಾಗೂ ಸೈಬರ್ ಫೊರೆನ್ಸಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ್ ಕೆ  ತಮ್ಮ ಉಪನ್ಯಾಸದಲ್ಲಿ ಕೃತಕ ಬುದ್ಭಿಮತ್ತೆಯ ಅನ್ವಯಿಕೆಗಳು, ಕೃತಕ ಬುದ್ಧಿಮತ್ತೆಯಲ್ಲಿ ಬಳಸಲ್ಪಡುವ ತಂತ್ರಾಂಶಗಳು, ಬಳಕೆದಾರರ ನೈತಿಕ ಜವಾಬ್ದಾರಿಗಳು, ಈ ಕ್ಷೇತ್ರದಲ್ಲಿನ ಅವಕಾಶಗಳು ಹಾಗೂ ಸವಾಲುಗಳು, ಶಿಕ್ಷಣ ಹಾಗೂ ಸಂಶೋಧನೆಯಲ್ಲಿ ಎಐನ ಸಮರ್ಪಕ ಬಳಕೆ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

ಚ್ಯಾಟ್ ಜಿಪಿಟಿ ಬಳಸುವಾಗ ಬೇಕಾಗುವ ಪ್ರಾಂಪ್ಟ್ ಎಂಜಿನಿಯರಿಂಗ್‌ನ ಮಹತ್ವದ ಕುರಿತು ಪ್ರಾತ್ಯಕ್ಷಿಕೆಗಳ ಸಹಾಯದಿಂದ ವಿವರಣೆ ನೀಡಿದರು.

ಪೂಜಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕಾಲೇಜಿನ ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಂಯೋಜಕ ಪರೀಕ್ಷಾಂಗ ಕುಲಸಚಿವ ವಿನಯಚಂದ್ರ ಸ್ವಾಗತಿಸಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಹರ್ಷಿತ್ ಆರ್. ವಂದಿಸಿದರು. ಸ್ನಾತಕೋತ್ತರ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಬಿ. ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article