
ರಾಜ್ಯ ಒಲಿಂಪಿಕ್ಸ್‌ನಲ್ಲಿ ಮಿಂಚಿದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳು
Wednesday, January 22, 2025
ಪುತ್ತೂರು: ರಾಜ್ಯ ಒಲಿಂಪಿಕ್ಸ್ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ರಂಜಿತ್ ದ್ವಿತೀಯ ಬಿಎ 108+ ಕೆಜಿ ವಿಭಾಗದಲ್ಲಿ ಚಿನ್ನ, ಸ್ಪಂದನಾ ದ್ವಿತೀಯ ಬಿಎಸ್ಸಿ 45 ಕೆಜಿ ವಿಭಾಗದಲ್ಲಿ ಬೆಳ್ಳಿ, ಬ್ಯೂಲಾಹ್ ಪಿಟಿ ದ್ವಿತೀಯ ಎಂಕಾಂ 64 ಕೆಜಿ ವಿಭಾಗದಲ್ಲಿ ಬೆಳ್ಳಿ, ಶಿವಾನಿ ದ್ವಿತೀಯ ಬಿಎಸ್ಸಿ 45 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಈ ಮೂಲಕ ಕಾಲೇಜಿನ ಕ್ರೀಡಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಇವರನ್ನು ಸಂಸ್ಥೆಯ ಸಂಚಾಲಕ ಅತಿ ವಂದನೀಯ ಲಾರೆನ್ಸ್ ಮಸ್ಕರೇನ್ಹಸ್ ಮತ್ತು ಪ್ರಾಂಶುಪಾಲ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಅಭಿನಂದಿಸಿದ್ದಾರೆ.