ಉಡುಪಿ: ಖ್ಯಾತ ಚಲನಚಿತ್ರ ನಟಿ ಪೂಜಾ ಗಾಂಧಿ ಸೋಮವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ, ಕೃಷ್ಣದರ್ಶನದ ಬಳಿಕ ಪರ‍್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಕೋಟಿ ಲೇಖನ ಯಜ್ಷ ದೀಕ್ಷೆ ಸ್ವೀಕರಿಸಿದರು.
ತನ್ನ ಮಾತೃಭಾಷೆ ಬೇರೆಯಾದರೂ ಶ್ರದ್ಧೆಯಿಂದ ಕನ್ನಡ ಭಾಷೆ ಮಾತನಾಡಲು ಕಲಿತದ್ದು ಮಾತ್ರವಲ್ಲ ಬರೆಯಲೂ ಪ್ರಾರಂಭಿಸಿರುವುದಾಗಿ ತಿಳಿಸಿದರು.