
ಚಲನಚಿತ್ರ ತಾರೆ ಡಿಂಪಲ್‌ಕಪಾಡಿಯಾ ಧರ್ಮಸ್ಥಳಕ್ಕೆ ಭೇಟಿ
Sunday, January 5, 2025
ಉಜಿರೆ: ಖ್ಯಾತ ಚಲನಚಿತ್ರ ತಾರೆ ಡಿಂಪಲ್ ಕಪಾಡಿಯಾ ಸಕುಟುಂಬಿಕರಾಗಿ ಭಾನುವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ, ವಿಶೇಷ ಸೇವೆ ಸಲ್ಲಿಸಿದರು.
ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಡಿ. ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಅನ್ನಪೂರ್ಣ ಛತ್ರದಲ್ಲಿ ಭೋಜನ ಸ್ವೀಕರಿಸಿ ಪ್ರಯಾಣ ಮುಂದುವರಿಸಿದರು.