
ಪೊಲೀಸ್ ಕಮಿಷನರ್ ಅವರಿಗೆ ಅಭಿನಂದನೆ ಸಲ್ಲಿಸಿದ ಕೋಟೆಕಾರ್ ಬ್ಯಾಂಕ್ ನಿಯೋಗ
Saturday, January 25, 2025
ಉಳ್ಳಾಲ: ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಸಂಘ ಕೆ.ಸಿ. ರೋಡ್ ಶಾಖೆಯಲ್ಲಿ ನಡೆದ ಕೋಟ್ಯಂತರ ಮೌಲ್ಯದ ನಗ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಶೀಘ್ರ ಬಂಧಿಸಿ ಪ್ರಕರಣವನ್ನು ಕಮಿಷನರ್ ನೇತೃತ್ವದ ತಂಡ ಭೇದಿಸಿದ್ದು, ಈ ಹಿನ್ನೆಲೆಯಲ್ಲಿ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾದ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಅವರ ನಿಯೋಗ ಅಭಿನಂದನೆ ಸಲ್ಲಿಸಿದರು.
ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಅಬುಸಾಲಿ ಕಿನ್ಯಾ, ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ನಿರ್ದೇಶಕರಾದ ಉದಯ್ ಕುಮಾರ್ ಶೆಟ್ಟಿ, ಕೃಷ್ಣಪ್ಪ ಸಾಲಿಯಾನ್, ಅರುಣ್ ಕುಮಾರ್, ಗಂಗಾಧರ್ ಉಳ್ಳಾಲ್, ರಘು ಸಿ. ಉಚ್ಚಿಲ್ ಸುರೇಖಾ ಚಂದ್ರಹಾಸ್, ಸುನೀತಾ ಲೋಬೊ ಉಪಸ್ಥಿತರಿದ್ದರು.