ಪೊಳಲಿ ಕ್ಷೇತ್ರದಲ್ಲಿ ಮಾ.1 ರಿಂದ 7 ರವರೆಗೆ ಲೋಕಕಲ್ಯಾಣಾರ್ಥಕ್ಕಾಗಿ ‘ಶತಚಂಡಿಕಾಯಾಗ ಹಾಗೂ ಸೇವಾರೂಪದ ದೊಡ್ಡ ರಂಗಪೂಜೆ’ ಉತ್ಸವ

ಪೊಳಲಿ ಕ್ಷೇತ್ರದಲ್ಲಿ ಮಾ.1 ರಿಂದ 7 ರವರೆಗೆ ಲೋಕಕಲ್ಯಾಣಾರ್ಥಕ್ಕಾಗಿ ‘ಶತಚಂಡಿಕಾಯಾಗ ಹಾಗೂ ಸೇವಾರೂಪದ ದೊಡ್ಡ ರಂಗಪೂಜೆ’ ಉತ್ಸವ


ಬಂಟ್ವಾಳ: ತಾಲೂಕಿನ ಐತಿಹಾಸಿಕ ಹಿನ್ನಲೆಯ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯವೃದ್ಧಿಗಾಗಿ ಶತಚಂಡಿಕಾಯಾಗ ಹಾಗೂ ಸೇವಾರೂಪದ ದೊಡ್ಡ ರಂಗಪೂಜೆ ಉತ್ಸವವು ಬ್ರಹ್ಮಶ್ರೀ ವೇ.ಮೂ. ಪೊಳಲಿ ಶ್ರೀಕೃಷ್ಣ ತಂತ್ರಿಗಳ ಮಾರ್ಗದರ್ಶನದಲ್ಲಿ ಮಾ.1 ರಿಂದ 7 ರವರೆಗೆ ನಡೆಯಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತಿಳಿಸಿದರು.

ಶುಕ್ರವಾರ ಸಂಜೆ ಕ್ಷೇತ್ರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಾಸಕರು ದೇವಳದಲ್ಲಿರಿಸಲಾದ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಕ್ಷೇತ್ರದ ಸಾವಿರ ಸೀಮೆಯವರು ಸೇರಿ ಶತಚಂಡಿಕಾಯಾಗವನ್ನು ನಡೆಸಲಾಗುತ್ತಿದ್ದರೆ, ದೊಡ್ಡರಂಗಪೂಜೆಯು ಸೇವಾ ರೂಪದಲ್ಲಿ ನಡೆಯುತ್ತಿದೆ ಎಂದರು.

ಮಾ.1 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ಸಪ್ತಸತಿ ಪಾರಾಯಣ, ನವಾಕ್ಷರೀ ಜಪ ನಡೆಯಲಿದೆ. ಮಾ.2 ಬೆಳಿಗ್ಗೆ ಪಾರಾಯಣ, ನವಾಕ್ಷರೀ ಜಪ, ಮೃತ್ಯುಂಜಯ ಹೋಮ, ಸುಬ್ರಹ್ಮಣ್ಯ ಸಹಸ್ರನಾಮ ಹೋಮ ಸಂಜೆ ಶ್ರೀ ಚಕ್ರಪೂಜೆ ನಡೆಯುವುದು, ಮಾ.3 ರಂದು ಬೆಳಿಗ್ಗೆ ಪಾರಾಯಣ, ನವಾಕ್ಷರೀ ಜಪ, ನವಗ್ರಹ ಹೋಮ, ಮಾ.4 ರಂದು ಬೆಳಿಗ್ಗೆ ಕಾಳಿ ಸಹಸ್ರನಾಮಹೋಮ, ಸಪ್ತಸತಿ ಪಾರಾಯಣ, ನವಾಕ್ಷರೀ ಜಪ, ಸಂಜೆ ಮಂಟಪ ಸಂಸ್ಕಾರ, ಪ್ರಾಸಾದ ಶುದ್ದಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ಅಗ್ನಿ ಜನನ ಸಂಸ್ಕಾರ ಮೊದಲಾದ ವೈಧಿಕ ವಿಧಿ ವಿಧಾನ ನಡೆಯಲಿದೆ ಎಂದು ವಿವರಿಸಿದರು.

ಶತಚಂಡಿಕಾಯಾಗ:

ಮಾ.5 ರಂದು ಬೆಳಿಗ್ಗೆ 6 ರಿಂದ ಶತಚಂಡಿಕಾಯಾಗ ಆರಂಭವಾಗಲಿದ್ದು, 10.30 ಕ್ಕೆ ಹೋಮಪೂಜೆ, ಪೂರ್ಣಾಹುತಿ, ಮಧ್ಯಾಹ್ನ 12 ಗಂಟೆಗೆ ಶ್ರೀ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲಪೂಜೆ,ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ. ಅಂದು ಸಂಜೆ 6.30 ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿಸಂಜ ಅಜಯ್ ವಾರಿಯರ್ ಮತ್ತು ಬಳಗದಿಂದ ಭಕ್ತಿರಸಧಾರೆ ಹಾಗೂ ರಾತ್ರಿ 8.30 ರಿಂದ ಮಗಳೂರು ಲಲಿತಾ ಕಲಾವಿದರಿಂದ ತುಳುನಾಟಕ ಪ್ರದರ್ಶನ ಇರುತ್ತದೆ ಎಂದರು.

ಮಾ.6 ರಮನದು ದೊಡ್ಡ ರಂಗಪೂಜೆ ಉತ್ಸವದ ಪ್ರಯುಕ್ತ ಬೆಳಿಗ್ಗೆ ಗಣಪತಿಹೋಮ, ಕಲಶಪೂಜೆ, ಪ್ರಧಾನಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಸಂಜೆ 6.30 ಕ್ಕೆ ಮಹಾಪೂಜೆ, ರಾತ್ರಿ 7.30 ಕ್ಕೆ ದೊಡ್ಡರಂಗಪೂಜೆಯ ಬಳಿಕ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ.7 ಬೆಳಿಗ್ಗೆ ಕಲಶಪೂಜೆ, ಗಣಪತಿಹೋಮ, ಪ್ರಧಾನ ಹೋಮ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ ಎಂದು ಹೇಳಿದರು.

ಶತಚಂಡಿಕಾಯಾಗದ ಯಶಸ್ವಿಗಾಗಿ ಕ್ಷೇತ್ರದ ಸಾವಿರ ಸೀಮೆಯ ಭಕ್ತರ, ವಿವಿಧ ಸಂಘಸಂಸ್ಥೆಗಳ ಪೂರ್ವ ಸಿದ್ದತಾ ಸಭೆಯನ್ನು ನಡೆಸಲಾಗಿದೆ. ಶತಚಂಡಿಕಾಯಾಗ ಹಾಗೂ ದೊಡ್ಡರಂಗಪೂಜೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ 15 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲು ತೀರ್ಮಾನಿಸಲಾಗಿದೆ, ಕ್ಷೇತ್ರದ ಬ್ರಹ್ಮಕಲಶದ ಸಂದರ್ಭದಲ್ಲಿ ದುಡಿದಿರುವ ಸಾವಿರಾರು ಸ್ವಯಂಸೇವಕರು, ವಿವಿಧ ಸಂಘಸಂಸ್ಥೆಗಳು ಸಹಿತ ಭಕ್ತಸಮೂಹ ಈ ಎರಡು ದಿನಗಳಲ್ಲು ಸರವಯಂಸೇಬಕರಾಗಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಶತಚಂಡಿಕಾಯಾಗದ ದಿನದಂದು 25 ಸಾವಿರಕ್ಕು ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಚೆಮನಡಿನ ಗದ್ದೆಯಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಶತಚಂಡಿಕಾಯಾಗಕ್ಕೆ ಬರುವ ಭಕ್ತಾದಿಗಳಿಗೆ ಬೆಳಗ್ಗಿನ ಉಪಹಾರ ವ್ಯವಸ್ಥೆ, ದೇವಳಕ್ಕೆ ಬರುವ ಭಕ್ತಾದಿಗಳಿಗೆ ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಗುವುದು, ಪೊಳಲಿ ಸೇತುವೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ದುರಸ್ಥಿ ಕಾರ್ಯ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಾಧ್ಯವಾಗದಿದ್ದಲ್ಲಿ ಮಂಗಳೂರು ಕಡೆಯಿಂದ ಅಗಮಿಸುವ ಭಕ್ತರಿಗೆ ಲಘವಾಹನದ ವ್ಯವಸ್ಥೆಯನ್ನು ಮಾಡಲಾಗುವುದು ಎಂದ ಶಾಸಕ ರಾಜೇಶ್ ನಾಯ್ಕ್ ಅವರು ಶತರುದ್ರಯಾಗಕ್ಕೆ ಸಂಬಂಧಿಸಿ ಜಾಗ ಗುರುತಿಸಿ ಈಗಾಗಲೇ ಸ್ಥಳದಲ್ಲಿ ವೈಧಿಕ ವಿಧಿ ವಿಧಾನ ನೆರವೇರಿಸಿ ಯಾಗಕುಂಡದ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ಷೇತ್ರದ ಆಡಳಿತಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಅರ್ಚಕರಾದ ಪದ್ಮನಾಭ ಭಟ್, ಅನಂತಪದ್ಮನಾಭ ಭಟ್ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article