
ಕಟೀಲು ದೇವಿಯ ದರ್ಶನ ಪಡೆದ ಶಿಲ್ಪಾ ಶೆಟ್ಟಿ
Friday, February 28, 2025
ಮಂಗಳೂರು: ಕರ್ನಾಟಕ ಪ್ರವಾಸದಲ್ಲಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ನಲ್ಲಿ ದೇವಸ್ಥಾನ ಭೇಟಿಯ ಆರು ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.
ತಾಯಿ ಸುನಂದಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ ಮತ್ತು ಮಕ್ಕಳು ಜೊತೆಗಿದ್ದರು. ದೇವಿಗೆ ನಮಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳೂರು ಮಲ್ಲಿಗೆ ಮುಡಿದು ಸಂಭ್ರಮಿಸಯುತ್ತಿರುವ ಶಿಲ್ಪಾ ಶೆಟ್ಟಿ ಅವರ ನಗುಮೊಗದ ಫೋಟೋವನ್ನು ಕಾಣಬಹುದು. ನಂತರದ ಫೋಟೋಗಳು ತಾಯಿ ಮಕ್ಕಳು ಮತ್ತು ಸಹೋದರಿಯನ್ನೊಳಗೊಂಡಿದೆ.