
ರೇಷನ್ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ಕೊರತೆ: ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನೆ
ಮಂಜೇಶ್ವರ: ರೇಷನ್ ಅಂಗಡಿಗಳಲ್ಲಿ ಆಹಾರ ಸಾಮಗ್ರಿಗಳ ಕೊರತೆಯನ್ನು ವಿರೋಧಿಸಿ, ಮಂಜೇಶ್ವರ-ಕುಂಬಳೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಸಂಯುಕ್ತವಾಗಿ ಮಂಜೇಶ್ವರ ತಾಲೂಕು ಸಪ್ಲೈ ಕಚೇರಿಯ ಕಡೆಗೆ ಪ್ರತಿಭಟನಾ ಧರಣಿಯನ್ನು ನಡೆಸಿದರು.
ಮಾಜಿ ಡಿಸಿಸಿ ಅಧ್ಯಕ್ಷ ಹಕ್ಕೀಂ ಕುನ್ನಿಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್ ಅಧ್ಯಕ್ಷತೆ ವಹಿಸಿದರು.
ಡಿಸಿಸಿ ಜನರಲ್ ಕಾರ್ಯದರ್ಶಿಗಳಾದ ಸೋಮಶೇಖರ ಜೆ.ಎಸ್., ಸುಂದರ ಅರಿಕ್ಕಾಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ, ಉಮ್ಮರ್ ಬೋರ್ಕಲ, ಜುನೈದ್ ಉರುಮಿ, ಫಾರೂಕ್ ಶಿರಿಯಾ, ದಿವಾಕರ ಜೆ.ಎಸ್. ಅವರು ಮಾತನಾಡಿದರು.
ನಾಯಕರಾದ ಸತ್ಯನ್ ಸಿ. ಉಪ್ಪಳ, ಮನ್ಸೂರ್ ಬಿ.ಎಂ., ಖಲೀಲ್ ಬಜಾಲ್, ಇರ್ಷಾದ್ ಮಂಜೇಶ್ವರ, ನಾಗೇಶ್ ಮಂಜೇಶ್ವರ, ಮೋಹನ್ ರೈ, ನಾಸರ್ ಮೊಗ್ರಾಲ್, ಪೃಥ್ವಿರಾಜ್ ಶೆಟ್ಟಿ, ರವಿ ರಾಜ್, ಸಲೀಂ ಪುತ್ತಿಗೆ, ಶೆರಿಲ್ ಕಯ್ಯಾಂ ಕೂಡಲ್, ಮಂಡಲಾಧ್ಯಕ್ಷರಾದ ಪುರಷೋತ್ತಮ ಅರಿಬೈಲ್, ಬಾಬು ಬಂದ್ಯೋಡ್, ಹನೀಫ್ ಪಡಿಂಞರ್, ಸುಲೈಮಾನ್ ಪುತ್ತಿಗೆ, ವಸಂತ ಮಾಸ್ತರ್, ಶಿಹಾಬ್ ಕುಬನೂರ್, ಗಣೇಶ್ ಪಾವೂರ್, ರಾಜೇಶ್ ನಾಯಕ್, ಬರ್ನಾಡ್ ಡಿ’ಅಲ್ಮೆಡಾ, ಪ್ರದೀಪ್ ಶೆಟ್ಟಿ, ವಿನೋದ್ ಕುಮಾರ್, ಅಜೀಜ್ ಕಲ್ಲೂರ್, ಮುಹಮ್ಮದ್ ಜೆ, ಸದಾಶಿವ ಕೆ, ಗಣೇಶ್ ಶೆಟ್ಟಿಗಾರ್, ಅಶ್ರಫ್ ಮುಟ್ಟಂ, ಮನ್ಸೂರ್ ಕಂಡತಿಲ್ ಮತ್ತು ಮಹಿಳಾ ಕಾಂಗ್ರೆಸ್ ನೇತೃತ್ವದ ಶಾಂತಾ ಅರ್. ನಾಯಕ್, ಗೀತಾ ಬಂದ್ಯೋಡ್, ಜೆಸ್ಸಿ ಅನಿಲ್, ತಾಹಿರಾ, ಸೀತಾ ಮತ್ತಿತರರು ಇದ್ದರು.