
ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್
Friday, February 14, 2025
ಪುತ್ತೂರು: ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ಸ್ಟೆಲ್ಲಾ ವರ್ಗೀಸ್ ನೇಮಕಗೊಂಡಿದ್ದಾರೆ.
ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪಾತ್ರ ಅವರು ರಾಯಚೂರು ಮಹಾನಗರಪಾಲಿಕೆ ಕಮಿಷನರ್ ಆಗಿ ವರ್ಗಾವಣೆಗೊಂಡ ಕೆಲ ದಿನಗಳ ಕಾಲ ಶ್ರವಣ್ ಕುಮಾರ್ ಪ್ರೊಬೆಷನರಿ ಸಹಾಯಕ ಆಯುಕ್ತರಾಗಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಪುತ್ತೂರು ಉಪವಿಭಾಗ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳ ವ್ಯಾಪ್ತಿಯನ್ನು ಒಳಗೊಂಡಿವೆ.