
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸನ್ಮಾನ ಸಮಾರಂಭ
ಪ್ರಾಮಾಣಿಕತೆಯು ಒಂದು ಮೂಲಭೂತ ಮೌಲ್ಯ: ಪ್ರೊ. ಲಿಯೋ ನೋರೋನ್ನ
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿ ಸಂಘದ ವತಿಯಿಂದ ರ‍್ಯಾಂಕ್ ವಿಜೇತರಿಗೆ, ನಿವೃತ್ತ ಪ್ರಾಧ್ಯಾಪಕರಿಗೆ ಹಾಗೂ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭವನ್ನು ಕಾಲೇಜಿನ ರಜತ ಮಹೋತ್ಸವದ ಸ್ಮಾರಕ ಭವನದಲ್ಲಿ ನಡೆಯಿತು.
ಕಾಲೇಜಿನ ಮಾಜಿ ಪ್ರಾಚಾರ್ಯ ಪ್ರೊ. ಲಿಯೋ ನೋರೋನ್ನ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಪ್ರಾಮಾಣಿಕ ವ್ಯಕ್ತಿಯಾಗಿರುವುದು ನಿಜಕ್ಕೂ ಉದಾತ್ತ ಸದ್ಗುಣವಾಗಿದೆ. ಪ್ರಾಮಾಣಿಕತೆಯು ಒಂದು ಮೂಲಭೂತ ಮೌಲ್ಯವಾಗಿದೆ.ಇದು ನಮ್ಮ ಜೀವನ ಮತ್ತು ನಮ್ಮ ಸುತ್ತಲಿರುವವರ ಜೀವನದ ಮೇಲೆ ಆಳವಾದ ಪ್ರಭಾವ ಬೀರುವ ಆಯ್ಕೆಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನ್ಹಸ್ ಅವರು ಅಧ್ಯಕ್ಷತೆಯನ್ನು ವಹಿಸಿ ಗುರಿಯನ್ನು ಸಾಧಿಸಲು ನಮಗೆ ದೊರೆತಿರುವ ಸಮಯವನ್ನು ಪಾಲಿಸಿ, ಪ್ರತಿಭೆಯನ್ನು ಬುದ್ಧಿವಂತಿಕೆಯಿಂದ ಬಳಸಿ ಜಗತ್ತಿನಲ್ಲಿ ಸಕಾರಾತ್ಮಕ ಪ್ರಭಾವ ಬೀರಲು ಪ್ರತಿಯೊಂದು ಸಂದರ್ಭವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಗೆ ಅಮೂಲ್ಯ ಕೊಡುಗೆ ನೀಡಿದ ಮಾಜಿ ಉಪ ಪ್ರಾಚಾರ್ಯ ಡಾ. ಪಿ.ಎಸ್. ಕೃಷ್ಣಕುಮಾರ್ ರವರನ್ನು ಸನ್ಮಾನಿಸಲಾಯಿತು. ರಸಾಯನ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಎಡ್ವಿನ್ ಡಿಸೋಜ ಸನ್ಮಾನ ಪತ್ರ ವಾಚಿಸಿದರು.
ರ‍್ಯಾಂಕ್ ವಿಜೇತರಾದ ಸುಧನ್ವಶಾಮ್, ರಿತೇಶ್ ರೈ, ಅರ್ಪಿತ, ರೀನಾ ಎ.ವಿ., ಸಿತಾರ ಶೇರಿನ, ಸುಶಾಂತ್ ಕೆ.ಎಂ., ಚಂದ್ರಾಕ್ಷ, ಹಾಶಿನಿ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ಕ್ರೀಡಾಪಟುಗಳಾದ ಸ್ಪಂದನ, ಬ್ಯೂಲಾ, ರಂಜಿತ್ ಕುಮಾರ್, ಚೈತ್ರಿಕ, ಯಶ್ವಿನ್, ಮೊಹಮ್ಮದ್ ಮುಹಾದ್, ಪೃಥ್ವಿ, ಶಬರೀಶ್ ರೈ, ಯಶ್ವಿನ್ ಹಾಗೂ ವರ್ಷ ಅವರನ್ನು ಸನ್ಮಾನಿಸಲಾಯಿತು.
ರ‍್ಯಾಂಕ್ ವಿಜೇತರ ಪಟ್ಟಿಯನ್ನು ಸಹಾಯಕ ಪ್ರಾಧ್ಯಾಪಕರುಗಳಾದ ವಾಸುದೇವ ಎನ್., ಡಾ. ಮಾಲಿನಿ ಕೆ., ಪ್ರೇಮಲತಾ ಕೆ., ಡಾ. ವಿನಯ ಚಂದ್ರ, ಹರ್ಷಿತ್ ಆರ್. ಹಾಗೂ ಶ್ರೀಮಣಿ ವಾಚಿಸಿದರು. ಪ್ರತಿಭಾವಂತ ಕ್ರೀಡಾಪಟುಗಳ ಸನ್ಮಾನ ಪತ್ರವನ್ನು ದೈಹಿಕ ನಿರ್ದೇಶಕ ಡಾ. ಇಲಿಯಾಸ್ ಪಿಂಟೋ ವಾಚಿಸಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಹೇಕ್ಸನ ಫರ್ನಾಂಡಿಸ್ ತೃತೀಯ ಬಿಸಿಎ, ಫಾತಿಮಾತ್ ಅತುಫಾ ತೃತೀಯ ಬಿಸಿಎ, ಸಿಮ್ರನ್ ತಾಜ್ ತೃತೀಯ ಬಿ.ಕಾಂ. ಅವರನ್ನು ಸಂಸ್ಥೆಯ ಸಂಚಾಲಕರಾದ ಅತಿ ವಂ. ಲಾರೆನ್ಸ್ ಮಸ್ಕರೇನ್ಹಸ್ ಅವರು ಸನ್ಮಾನಿಸಿದರು. ಮಾಯಿ ದೇ ದೇವುಸ್ ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟಾ ಉಪಸ್ಥಿತರಿದ್ದರು.
ಪರ್ಫಾರ್ಮಿಂಗ್ ಆರ್ಟ್ಸ್ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ರಾಧಾಕೃಷ್ಣ ಗೌಡ ವಿ. ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಸ್ಪರ್ಲ್ ಫಿಯೊನಾ ಪಿರೇರಾ ವಂದಿಸಿ, ಬಿಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ ರೈ ಕಾರ್ಯಕ್ರಮವನ್ನು ನಿರೂಪಿಸಿದರು.