
ಅಪರಿಚಿತ ವ್ಯಕ್ತಿಯ ಕೊಳೆತ ಶವ ಪತ್ತೆ
Wednesday, February 26, 2025
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯ ಪಾಂಗಳಾಯ ಎಂಬಲ್ಲಿ ನಿರ್ವಹಣೆ ಇಲ್ಲದ ಅಡಿಕೆ ತೋಟದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ. ಅಡಿಕೆ ಕದಿಯಲು ಬಂದು ಅಡಿಕೆ ಮರ ತುಂಡಾಗಿ ಆತನ ಮೈಮೇಲೆ ಬಿದ್ದಿರುವ ಶಂಕೆ ಕಂಡುಬಂದಿದೆ. ಸುಮಾರು 45 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ.
ಅಡಿಕೆ ಮರ ಕೊಳೆತ ಮೃತಶರೀರದ ಪಕ್ಕದಲ್ಲಿಯೇ ಬಿದ್ದಿರುವುದು, ಮೃತದೇಹದಿಂದ ರಕ್ತ ಹರಿದಿರುವುದು ಕಂಡುಬಂದಿದೆ. ಈ ಕಾರಣದಿಂದ ಈತ ಸ್ಥಳೀಯನಾಗಿದ್ದು, ಅಡಕೆ ಕದಿಯಲು ಬಂದ ಸಂದರ್ಭ ಮರವೇರುತ್ತಿರುವಾಗ ಆಕಸ್ಮಿಕವಾಗಿ ಅರ್ಧದಿಂದ ಮುರಿದು ವ್ಯಕ್ತಿಯ ಮೇಲೆಯೇ ಬಿದ್ದಿರುವ ಸಾಧ್ಯತೆ ಕಂಡುಬಂದಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಮೃತವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.