
ಕಾರಿಗೆ ಢಿಕ್ಕಿ ಹೊಡೆದ ಟಿಪ್ಪರ್: ಅಪಘಾತದಲ್ಲಿ ಟಿಪ್ಪರ್ ಚಾಲಕ ಸಾವು
Wednesday, February 5, 2025
ಶಿರ್ವ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅರಸೀಕಟ್ಟೆ ದುರ್ಗಾನಗರ ಸಮೀಪ ಶಿರ್ವ-ಶಂಕರಪುರ ರಸ್ತೆಯಲ್ಲಿ ಟಿಪ್ಪರ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಟಿಪ್ಪರ್ ಚಾಲಕ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೃತ ಟಿಪ್ಪರ್ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ್ (55) ಎಂದು ಗುರುತಿಸಲಾಗಿದೆ.
ಕಟಪಾಡಿ ಕಡೆಯಿಂದ ಶಂಕರಪುರ ದಾಟಿ ಶಿರ್ವ ಕಡೆಗೆ ಹೋಗುತ್ತಿದ್ದ ಕಾರಿಗೆ ಶಿರ್ವ ಬಂಟಕಲ್ಲು ಮಾರ್ಗವಾಗಿ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ರಸ್ತೆ ಪಕ್ಕದಲ್ಲೇ ಪಲ್ಟಿಯಾಗಿದ್ದು ಇದರ ಅಡಿಗೆ ಸಿಲುಕಿಕೊಂಡಿದ್ದ ಚಾಲಕ ಗಂಭಿರವಾಗಿ ಗಾಯಗೊಂಡಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.