ಲಗೇಜ್ ಕಳವು: ಮಾನವೀಯತೆ ಮೆರೆದ ಸ್ಥಳೀಯರು

ಲಗೇಜ್ ಕಳವು: ಮಾನವೀಯತೆ ಮೆರೆದ ಸ್ಥಳೀಯರು

ಸುಳ್ಯ: ಮೈಸೂರಿಗೆ ಬಂದಿದ್ದ ವೇಳೆ ಹಣವಿದ್ದ ಲಗೇಜ್ ಕಳ್ಳತನವಾದ ಕಾರಣ ಸುಬ್ರಹ್ಮಣ್ಯದಿಂದ ಕೇರಳಕ್ಕೆ ನಡೆದುಕೊಂಡು ಹೋಗಲು ಸಿದ್ಧರಾದ ಕೇರಳದ ಕುಟುಂಬವೊಂದರ ಮೂವರನ್ನು ಗುತ್ತಿಗಾರಿನ ಸಹೃದಯಿಗಳು ಹಣ ಸಂಗ್ರಹಿಸಿ ವಾಹನದಲ್ಲಿ ಕಳುಹಿಸಿದ ಘಟನೆ ನಡೆದಿದೆ. 

ಮೂಲತಃ ಕೇರಳದ ಇಡುಕ್ಕಿ ಜಿಲ್ಲೆಯ ದಂಪತಿ ಮತ್ತು ಮಗ ಸಿಬಿನ್ ಜೂವೇನ್ ಎಂಬವರು ಮೈಸೂರು ಕಡೆಗೆ ತೆರಳಿದ್ದರು. ಅಲ್ಲಿಂದ ಮಾಹೆ ಚರ್ಚಿಗೆ ವಾಪಾಸ್ ಆಗುವ ಸಂದರ್ಭದಲ್ಲಿ ತಮ್ಮ ಪರ್ಸ್, ಮೊಬೈಲ್ ಸಮೇತ ಲಗೇಜ್ ಅನ್ನು ಅಪರಿಚಿತರು ಕಳ್ಳತನ ಮಾಡಿದ್ದರು. ಹೀಗಾಗಿ ಅವರು ಕೈಯಲ್ಲಿದ್ದ ಹಣದಿಂದ ಮಡಿಕೇರಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದಾರೆ. ನಂತರ ಇಡುಕ್ಕಿಗೆ ನಡೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. 

ಈ ನಡುವೆ ಗುತ್ತಿಗಾರಿನಲ್ಲಿ ಪರಿಚಯಸ್ಥ ಯುವಕನೊಬ್ಬ ಇರುವ ಬಗ್ಗೆ ತಿಳಿದು ಅಲ್ಲಿಗೆ ನಡೆದುಕೊಂಡು ಹೋಗಿ ವಿಚಾರಿಸಿದ್ದರೂ ಆ ಯುವಕ ಅಲ್ಲಿರಲಿಲ್ಲ. ಈ ವೇಳೆ ಈ ಕುಟುಂಬದ ಬಗ್ಗೆ ಶೇಷಪ್ಪ ನಾಯ್ಕ್ ಹಾಲೇಮಜಲು ಎಂಬವರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಅಧ್ಯಕ್ಷ ಚಂದ್ರಶೇಖರ ಕಡೋಡಿ ಅವರ ಗಮನಕ್ಕೆ ತಂದಿದ್ದಾರೆ. 

ಕೂಡಲೇ ಚಂದ್ರಶೇಖರ ಅವರು ಗುತ್ತಿಗಾರು ಚರ್ಚ್ನ ಧರ್ಮಗುರು ವಂ.ಆದರ್ಶ್ ಜೋಸೆಫ್ ಅವರೊಂದಿಗೆ ಮಲಯಾಳಂನಲ್ಲಿ ಮಾತಾಡಿಸಿ ಅವರನ್ನು ಊರಿಗೆ ಕಳಿಸುವ ವ್ಯವಸ್ಥೆ ಮಾಡಿದರು. ಚರ್ಚ್ ಧರ್ಮಗುರು ಆದರ್ಶ್ ಜೋಸೆಫ್ , ಶ್ರೀ ಮಂಗಳಾ ಡ್ರೈವಿಂಗ್ ಸ್ಕೂಲ್ ಮಾಲಕ ಸಾತ್ವಿಕ್ ಕನ್ನಡ್ಕ, ಭರತ್ ದೇರುಮಜಲ್, ಶೇಷಪ್ಪ ನಾಯ್ಕ್ ಅವರಿಂದ ಒಟ್ಟು 3800 ರೂ. ಸಂಗ್ರಹಿಸಿ ನೀಡಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article