
ನಾಳೆಯಿಂದ ತರಬೇತಿ ಕಾರ್ಯಾಗಾರ
Sunday, February 9, 2025
ಉಜಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಸಹಯೋಗದಲ್ಲಿ ಉಜಿರೆಯ ಎಸ್.ಡಿ.ಎಂ. ಎಂಜಿಯರಿಂಗ್ ಕಾಲೇಜಿನಲ್ಲಿ ಇಂದಿನಿಂದ 5 ದಿನಗಳ ಕಾಲ ಪರಿಣಾಮಕಾರಿ ಸಂಶೋಧನ ಪ್ರಬಂಧಗಳು ಮತ್ತು ಪ್ರಸ್ತಾವನೆಗಳ ತಯಾರಿ ಹಾಗೂ ಸಂವಹನ ಎಂಬ ವಿಷಯದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೋಮವಾರ ಪೂರ್ವಾಹ್ನ ಗಂಟೆ 10.30ಕ್ಕೆ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮವನ್ನು ವಿ.ಟಿ.ಯು ಕುಲಸಚಿವ ಡಾ. ರಂಗಸ್ವಾಮಿ ಉದ್ಘಾಟಿಸುವರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಮತ್ತು ಸತೀಶ್‌ಚಂದ್ರ ಎಸ್. ಶುಭಾಶಂಸನೆ ಮಾಡುವರು.