
ಮಾ.23 ರಂದು ಕಾರಿಂಜಬೆಟ್ಟ ಹತ್ತುವ ಸಾಹಸ ಮಾಡಲಿದ್ದಾರೆ ಕೋತಿರಾಜ್
ಬಂಟ್ವಾಳ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕಾರಿಂಜೇಶ್ವರ ಬೆಟ್ಟವನ್ನು ಏರುವ ಸಾಹಸಕ್ಕೆ ಕೋತಿರಾಜ್ ಮುಂದಾಗಿದ್ದು, ಮಾ.23 ರಂದು ಬೆಳಿಗ್ಗೆ ಬೆಟ್ಟದ ಮೇಲೆ ಏರುವ ಬಗ್ಗೆ ಶನಿವಾರ ಬಿ.ಸಿ.ರೋಡಿನಲ್ಲಿ ಸುದ್ದಿಗರರಿಗೆ ತಿಳಿಸಿದ್ದಾರೆ.
ಕರುನಾಡಿನ "ಸ್ಪೈಡರ್ ಮ್ಯಾನ್" ಎಂದೇ ಖ್ಯಾತಿ ಪಡೆದ ಕೋತಿರಾಜ್ ಅವರು ಪ್ರಥಮ ಬಾರಿಗೆ ದ.ಕ. ಜಿಲ್ಲೆಯ ಬಂಟ್ವಾಳಕ್ಕಾಗಮಿಸಿ ಕಾರಿಂಜ ಬೆಟ್ಟವನ್ನೇರುವ ತನ್ನ ಸಾಹಸದ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಬಡವರ ಕಲ್ಯಾಣಕ್ಕಾಗಿ ಟ್ರಸ್ಟ್ ಒಂದನ್ನು ನಡೆಸುವ ಕೋತಿರಾಜ್ ಅವರು, ಆ ಮೂಲಕ ಇನ್ನಷ್ಟು ಸಮಾಜ ಸೇವೆ ಮಾಡಲು ಆರ್ಥಿಕ ಸಹಾಯಧನದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವನ್ನು ಅವರು ಯಾಚಿಸಿದ್ದಾರೆ.
ಸ್ಪೋಟ್ಸ್೯ ಕ್ಲಬ್ ನಿರ್ಮಾಣದ ಕನಸು:
ತಾನು ಒಂದಷ್ಟು ಬಡ ಮಕ್ಕಳನ್ನು ಓದಿಸುತ್ತಿದ್ದು,ವಿವಿಧ ಕಟ್ಟಡ,ಬೆಟ್ಟ ಹತ್ತಿ ಬರುವಂತ ಹಣದಿಂದ ಎಲ್ಲಿಯಾದರೂ ಜಮೀನು ಖರೀದಿಸಿ ಸ್ಪೋಟ್ಸ್ ೯ ಕ್ಲಬ್ ನಿರ್ಮಿಸಿ ಮಕ್ಕಳಿಗೆ ಕ್ರೀಡಾ ತರಬೇತಿ ನೀಡಬೇಕೆಂಬ ಕನಸನ್ನು ಹೊಂದಿದ್ದೆನೆ ಎಂದು ಕೋತಿರಾಜ್ ಅವರು ತಮ್ಮ ಮನದಾಳದ ಇಂಗಿತವನ್ನು ಸುದ್ದಿಗಾರರ ಮುಂದೆ ಬಿಚ್ಚಿಟ್ಟರು.
ಕಳೆದ ವರ್ಷ ಬಳ್ತಂಗಡಿಯ ಗಡಾಯಿಕಲ್ಲು ಹತ್ತಿದ್ದೆ ಹಾಗೆಯೇ ಉಡುಪಿ, ಮಂಗಳೂರಿನ ಬಹುಮಹಡಿಯ ಕಟ್ಟಡವನ್ನು ಹತ್ತಿದ್ದು, ಅದರಲ್ಲಿ ಬಂದ ಹಣದಿಂದ ರೋಪು, ಸೇಪ್ಟಿ ಜಾಕೆಟನ್ನು ಖರೀದಿಸಿದ್ದೆನೆ. ಮಲೆನಾಡು ತನಗೆ ಅತ್ಯಂತ ಇಷ್ಟದ ಪ್ರದೇಶವಾಗಿದೆಯಲ್ಲದೆ ತಾನು ಅಪಾರ ದೈವ, ದೇವರ ಭಕ್ತನಾಗಿದ್ದೆನೆ. ಧರ್ಮಸ್ಥಳ, ಕೊರಗಜ್ಜನ ಕ್ಷೇತ್ರ ಹೀಗೆ ಹಲವು ದೈವ,ದೇವಸ್ಥಾನಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದನೆ. ಇದೀಗ ಮಾ.23 ರಂದು ಐತಿಹಾಸಿಕ ಹಿನ್ನಲೆಯ ಕಾರಿಂಜ ಬೆಟ್ಟವನ್ನು ಹತ್ತುವ ನಿಟ್ಟಿನಲ್ಲಿ ಅಗಮಿಸಿದ್ದು,ಎಲ್ಲರು ಸಹಕರಿಸುವಂತೆ ಕೋರಿದರು. ಮಲೆನಾಡು ಭಾಗದ ಮಂಗಳೂರಿನಲ್ಲಿರುವ ಅತ್ಯಂತ ದೊಡ್ಡ ಬಹುಮಹಡಿಯ ಕಟ್ಟಡವನ್ನು ಹತ್ತಬೇಕೆಂಬ ಬಯಕೆ ಇದೆ. ಕಳೆದ ಬಾರಿ ಇದಕ್ಕೆ ಸಂಬಂಧಪಟ್ಟವರಿಂದ ಅನುಮತಿ ಕೋರಿದ್ದೆ ಆದರೆ ಸಿಕ್ಕಿರಲಿಲ್ಲ. ಈ ಬಾರಿಯು ಅನುಮತಿ ಕೋರಿದ್ದು, ಇದುವರೆಗೆ ಸಿಕ್ಕಿರುವುದಿಲ್ಲ ಎಂದರು.