ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಿರಿ: ಪದ್ಮರಾಜ್ ಆರ್. ಪೂಜಾರಿ

ನಾರಾಯಣ ಗುರುಗಳ ತತ್ವದಂತೆ ಎಲ್ಲರೂ ಜೊತೆಗೂಡಿ ಮುನ್ನೆಡೆಯಿರಿ: ಪದ್ಮರಾಜ್ ಆರ್. ಪೂಜಾರಿ


ಬಂಟ್ವಾಳ: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಆದರ್ಶದಂತೆ ಎಲ್ಲಾ ಸಮಾಜದವರನ್ನು ಗೌರವಿಸಿ ಒಟ್ಟುಗೂಡಿಸಿ ಮುನ್ನಡೆಯಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಮಾನವಾಗಿ ನಾವು ಕಾಣಬೇಕು ಎಂದು ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ಬಂಟ್ವಾಳ ತಾಲೂಕಿನ ಮಾಣಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದ ನೂತನ ನಿವೇಶನದಲ್ಲಿ ನಡೆದ ಯುವವಾಹಿನಿ ಮಾಣಿ ಘಟಕದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರವಿಚಂದ್ರ ಬಾಬಣಕಟ್ಟೆ ಅವರು ಈ ಸಾಲಿನ ನೂತನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯನ್ನು ಘೋಷಿಸಿದರು.

ಬಳಿಕ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಘಟಕದ ನೂತನ ಅಧ್ಯಕ್ಷರಾಗಿ ಶಿವಾರಾಜ್ ಪಿ.ಆರ್., ಉಪಾಧ್ಯಕ್ಷರಾಗಿ ಗಣೇಶ್ ಸಾಯಿ, ಸುಜಿತ್ ಅಂಚನ್, ಕಾರ್ಯದರ್ಶಿಯಾಗಿ ದೀಪಕ್ ಪೆರಾಜೆ, ಕೋಶಾಧಿಕಾರಿಯಾಗಿ ಸಚಿನ್ ಪೆರಾಜೆ, ಜೊತೆ ಕಾರ್ಯದರ್ಶಿಯಾಗಿ ಪ್ರಜ್ಞಾ ಎಂ. ಹಾಗೂ ವಿವಿಧ ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು ಆಯ್ಕೆಯಾದರು.

ನ್ಯಾಯವಾದಿ ರಂಜಿತ್ ಮೈರ ಘಟಕದ ಒಂದು ವರ್ಷದ ಕಾರ್ಯಕ್ರಮಗಳ ವರದಿಗಳನ್ನೊಳಗೊಂಡ ಮಾಣಿಕ್ಯ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಸಂಚಿಕೆಯ ಸಂಪಾದಕಿ ಪುಷ್ಪಶ್ರೀ ನಾಗೇಶ್ ಅವರನ್ನು ಗೌರವಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಬಾಂಧವ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಾಲಿನಲ್ಲಿ ಕರ್ನಾಟಕ ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯ ಶೇರ, ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೊಟ್ಯಾನ್, ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ ಅವರನ್ನು ಅಭಿನಂದಿಸಲಾಯಿತು.

ಘಟಕದ ಸದಸ್ಯೆ ಪದ್ಮಿನಿ ಅವರಿಗೆ ವಿದ್ಯಾನಿಧಿ ಹಾಗೂ ವಿಶ್ವನಾಥ ಪೂಜಾರಿ ಅವರಿಗೆ ಸಹಾಯಧನ ವಿತರಿಸಲಾಯಿತು. ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ ಕೊಂಕಣಪದವು ಸಹಿತ ಕಳೆದ ಸಾಲಿನ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು.

ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಘಟಕದ ಅಧ್ಯಕ್ಷ ಸುರೇಶ್ ಸೂರ್ಯ, ಬಂಟ್ವಾಳ ಪಂಚಾಯತ್ ರಾಜ್ ಇಂಜಿನೀಯರ್ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ತಾರನಾಥ ಸಾಲ್ಯನ್ ಪಿ., ಪುತ್ತೂರು ಕಂಪಾನಿಯೊ ನೆಮ್ಮದಿ ವೆಲ್‌ನೆಸ್ ಸೆಂಟರ್ ಮಾಲಕ ಕೆ. ಪ್ರಭಾಕರ ಸಾಲ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

ಸೃಜನ ಮಿತ್ತೂರು ಪ್ರಾರ್ಥಿಸಿ, ಘಟಕದ ಕಾರ್ಯದರ್ಶಿಯಾದ ಶಾಲಿನಿ ಜಗದೀಶ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ದೀಪಕ್ ಪೆರಾಜೆ ವಂದಿಸಿದರು. ಸದಸ್ಯೆಯರಾದ ರೇಣುಕಾ ಕಣಿಯೂರು, ಜಯಶ್ರೀ ಪ್ರಜ್ಞಾ ಎಂ. ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article