ಮಿಯ್ಯಾರು ಗ್ರಾಮ ಪಂಚಾಯತ್‌ನಲ್ಲಿ ಬಾರಿ ಗೋಲ್‌ಮಾಲ್, ಪಿಡಿಒಗೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು: ಗ್ರಾಮ ಪಂಚಾಯತ್ ಸಭೆ ಅರ್ಧಕ್ಕೆ ಮೊಟಕು

ಮಿಯ್ಯಾರು ಗ್ರಾಮ ಪಂಚಾಯತ್‌ನಲ್ಲಿ ಬಾರಿ ಗೋಲ್‌ಮಾಲ್, ಪಿಡಿಒಗೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು: ಗ್ರಾಮ ಪಂಚಾಯತ್ ಸಭೆ ಅರ್ಧಕ್ಕೆ ಮೊಟಕು


ಕಾರ್ಕಳ: ಸಾರ್ವಜನಿಕರ ಹಾಗೂ ಅಧಿಕಾರಿಗಳ ನಡುವೆ ನಡೆದ ವಾಗ್ವಾದ ತರಕ್ಕಕ್ಕೇರಿದ್ದು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದ ಅಧಿಕಾರಿಗಳು ಕೊನೆಗೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸಭೆಯನ್ನು ಮುಂದೂಡಿದ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿದೆ.

ಮಿಯ್ಯಾರು ಗ್ರಾಮ ಪಂಚಾಯತ್ ಬಾರಿ ಅವವ್ಯಹಾರ ಹಾಗೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ಪ್ರಶ್ನೆ ಹಾಗೂ ಗಂಭೀರ ಆರೋಪ ಹೊರಿಸಿದ ರಾಜೇಶ್ ಅವರು ಲೆಕ್ಕಪತ್ರದಲ್ಲಿ ಮೂರು ಪ್ಯಾನ್ ದುರಸ್ತಿಗೆ 13 ಸಾವಿರಕ್ಕೂ ಅಧಿಕ ಹಣವನ್ನು ವ್ಯಯ ಮಾಡಿದ್ದೀರಿ ನೀವು ಏನು ವೈಂಡಿಂಗ್‌ಗೆ ಬೆಳ್ಳಿಯ ವಯರ್ ಅನ್ನು ಬಳಸಿದ್ದೀರಾ? ಎಂದು ಪ್ರಶ್ನಿಸಿದರು. ಈ ವೇಳೆ ಪಿಡಿಓಗೆ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ಕಕ್ಕಾಬಿಕ್ಕಿಯಾಗಿ ಅವರು ಸರಿಯಾದ ಮಾಹಿತಿ ನೀಡದೇ ಉಡಾಫೆ ಉತ್ತರ ನೀಡಿದ್ದೇ ವಿವಾದಕ್ಕೆ ಕಾರಣವಾಯಿತು.

ಗ್ರಾಪಂ ಸದಸ್ಯ ಡೆನಿಯಲ್ ರೇಂಜರ್ ಮಾತನಾಡಿ, ಪಿಡಿಓ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿ ಗ್ರಾಮ ಸಭೆಯಲ್ಲಿ ನಡೆದ ಪಗ್ರತಿ ಪರಿಶೀಲನೆ ವರದಿಯನ್ನು ಸಂಬಂಧ ಪಟ್ಟ ಅಧಿಕಾರಿಗಳ ಅಥವಾ ಜನಪತ್ರಿನಿಧಿಗಳಿಗ ಗಮನಕ್ಕೆ ತರಲಾಗಿದೆಯೇ? ತರಲಾಗಿದ್ದಲ್ಲಿ ಅದರ ದಾಖಲೆಯನ್ನು ಸಭೆಗೆ ಒದಗಿಸುವಂತೆ ಪಟ್ಟು ಹಿಡಿದ್ದಾರೆ. ಈ ವೇಳೆ ಪಿಡಿಓ ಉತ್ತರಿಸಿ ಮಾಹಿತಿ ನೀಡಿರುವುದಾಗಿ ಸುಳ್ಳು ಹೇಳಿಕೆ ನೀಡಿದ್ದೆ ಮತ್ತಷ್ಟು ಅಕ್ರೋಶಕ್ಕೆ ಕಾರಣವಾಯಿತು.

ಸಾರ್ವಜನಿಕರಿಗೆ ಮಾಹಿತಿ ನೀಡಿದೆ ಕಾಟಚಾರಕ್ಕಾಗಿ ಗ್ರಾಮ ಸಭೆ ನಡೆಸಲಾಗುತ್ತಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಕೋರಂ ಇಲ್ಲದೇ ಸಭೆ ನಡೆಸುವಂತೆ ಇಲ್ಲ ಅದ್ದರಿಂದ ಈ ಗ್ರಾಮ ಸಭೆ ರದ್ದು ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ.

ಒಂದೇ ದಿನದಲ್ಲಿ ಏಳು ಗ್ರಾಮ ಸಭೆಗಳನ್ನು ನಡೆಸಲಾಗಿದೆ. ಅದು ಅಲ್ಲದೇ ಅಧ್ಯಕ್ಷರ ಮೇಲೆ ಹಣಕಾಸಿನ ಅರೋಪ ಜೊತೆಗೆ ಹಕ್ಕುಚ್ಯುತ್ತಿ ಇದ್ದು ಅವರು ಯಾವುದೇ ಸಭೆಯಲ್ಲಿ ಅಧ್ಯಕ್ಷರಾಗಿ ಭಾಗವಹಿಸುವಂತಿಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಪಿಡಿಓ ಮಾತ್ರ ಸಾರ್ವಧಿಕಾರಿಯಂತೆ ವರ್ತಿಸಿರುವುದು ಸರಿಯಲ್ಲ ಎಂದು ಡೇನಿಯಲ್ ರೇಂಜರ್ ಆರೋಪಿದ್ದಾರೆ.

ಗಲಾಟೆ ಗದ್ದಲ ನಡೆಯುತ್ತಿದ್ದರೂ ಅಧ್ಯಕ್ಷೆ ಸನ್ಮತಿ ನಾಯಕ್ ಮಾತ್ರ ಮೌನಕ್ಕೆ ಜಾರಿದ್ದು ಬದಲಾಗಿ ಸದಸ್ಯ ಗಿರೀಶ್ ಅಮಿನ್ ಅವರೇ ಎಲ್ಲದಕ್ಕೂ ಉತ್ತರ ನೀಡುತ್ತಿರುವುದು ಸಾರ್ವಜನಿಕರು ಆಕ್ಷೇಪ ಎತ್ತಿದ್ದಾಗ ಅಧ್ಯಕ್ಷರು ತನ್ನ ಪರವಾಗಿ ಸದಸ್ಯರು ಉತ್ತರ ನೀಡುತ್ತಿದ್ದಾರೆ ಎಂದು ಸಬೂಬು ನೀಡಿದರು ಮಾತ್ರವಲ್ಲದೆ ಕೋರಂ ಇಲ್ಲ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡುತ್ತಿದ್ದಂತೆ ಸಭೆಯನ್ನು ಮುಂದೂಡಿದರು.

ಪಿಡಿಓ ನಾಗರಾಜ್ ವಿರುದ್ಧ ಭ್ರಷ್ಟಾಚಾರದ ಆರೋಪ!:

ಪಿಡಿಓ ಅವರ ಕಾರ್ಯವ್ಯಾಪ್ತಿಗೆ ಬಾರದ ಪ್ರದೇಶಕ್ಕೆ ತೆರಳಿ ಅನಧಿಕೃತ ಮರಳುಗಾರಿಗೆ ಬೆಂಬಲಿಸಿ ಅವರಿಂದ ಮಾಮೂಲಿ ಪಡೆದುಕೊಂಡು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ನೊಡೆಲ್ ಅಧಿಕಾರಿ ಮೇಲಾಧಿಕಾರಿ ಗಮನಕ್ಕೆ ತಂದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ರಾಜೇಶ್ ನೆಲ್ಸನ್ ಡಿಸೋಜ, ಸೀತಾ, ಲೇನಿ ವೈಲೆಟ್ ರೇಂಜರ್, ಇಂದಿರಾ, ಶೋಬಾ, ರೇವತಿ ನಾಯಕ್, ಶೋಭಾ ಶೆಟ್ಟಿ, ಸುಮನಾ,ನವೀನ್ ಪೂಜಾರಿ, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article