ಅಕ್ರಮ ಗೋಹತ್ಯೆ, ಗೋಸಾಗಾಟ ಮಾಡುವವರ ಆಸ್ತಿ ಮುಟ್ಟುಗೋಲು ಅಸ್ತ್ರ ಬಳಸಿ ಡಾ. ಭರತ್ ಶೆಟ್ಟಿ ವೈ ಅಗ್ರಹ

ಅಕ್ರಮ ಗೋಹತ್ಯೆ, ಗೋಸಾಗಾಟ ಮಾಡುವವರ ಆಸ್ತಿ ಮುಟ್ಟುಗೋಲು ಅಸ್ತ್ರ ಬಳಸಿ ಡಾ. ಭರತ್ ಶೆಟ್ಟಿ ವೈ ಅಗ್ರಹ

ಕಾವೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಗೋ ಹತ್ಯೆ, ಗೋ ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆಯ ಬದಲು ಬಜರಂಗದಳ ಸಂಘಟನೆ ಪತ್ತೆ ಮಾಡಿ ಕೊಡುವಂತಹ ಪರಿಸ್ಥಿತಿ ಉಂಟಾಗಿದೆ. ಅಪರಾಧಿಗಳು ಭಯವಿಲ್ಲದೆ ಹಾಡು ಹಗಲೇ ರಾಜಾರೋಷವಾಗಿ ಸಾಗಾಟ ಮಾಡುತ್ತಿದ್ದು, ರಾಜ್ಯದಲ್ಲಿ ಕಾನೂನು ಇದೆಯೆ ಎಂಬ ಬಗ್ಗೆ ಅನುಮಾನ ಉಂಟಾಗುತ್ತಿದ್ದು, ಅಕ್ರಮ ಗೋಸಾಗಾಟ ಗೋಹತ್ಯೆಯ ಪ್ರಕರಣಗಳನ್ನು ನಿರ್ಲಕ್ಷ್ಯಮಾಡುವುದರಿಂದ ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬರಬಹುದು ಎಂದು ಡಾ. ಭರತ್ ಶೆಟ್ಟಿ ವೈ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

ಸುರಲ್ಪಾಡಿ ಬಳಿ ಗೋವುಗಳನ್ನು ಅಮಾನವೀಯ ವಾಗಿ ಕಟ್ಟಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದನ್ನು ನೋಡಿದರೆ ಹಿಂದೂಗಳಲ್ಲಿ ಆಕ್ರೋಶದ ಕಟ್ಟೆ ಒಡೆಯುವಂತಾಗಿದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಅಕ್ರಮ ಕಸಾಯಿಖಾನೆ, ಗೋಸಾಗಾಟ ಸಂಬಂಧಿಸಿದ ಪ್ರಕರಣಗಳಿಗೆ ಮುಲಾಜಿಲ್ಲದೆ ಆಸ್ತಿ ಮುಟ್ಟುಗೋಲು ಹಾಕಿ ಕಾನೂನು ಕ್ರಮ ಜರಗಿಸಿ, ಅಕ್ರಮ ದಂದೆ ಕೋರರನ್ನು ಮಟ್ಟ ಹಾಕಲಾಗಿತ್ತು. ಇದರಿಂದಾಗಿ ಕ್ಷೇತ್ರದಲ್ಲಿ ಗೋ ಕಳ್ಳಸಾಗಾಟ, ಅಕ್ರಮ ಗೋಹತ್ಯೆ ಬಹುತೇಕ ಇಲ್ಲವಾಗಿತ್ತು. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಅವ್ಯಾಹತವಾಗಿ ಗೋಸಾಗಾಟ ಅಕ್ರಮ ಕಸಾಯಿ ಖಾನೆಗಳು  ಬಡಾವಣೆಗಳ ಮಧ್ಯೆ ತಲೆಯೆತ್ತಿದ್ದು ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲವಾಗಿದೆ.

ಒಂದು ವರ್ಗವನ್ನು ಮೆಚ್ಚಿಸಲು ಸರಕಾರ ಇಂತಹ ಪ್ರಕರಣವನ್ನು ಮೌನ ಸಮ್ಮತಿ ನೀಡಿ ಪ್ರೋತ್ಸಾಹಿಸುತ್ತಿದ್ದು, ಗೋ ಕಳ್ಳರು, ಹತ್ಯೆ ಕೋರರ ವಿರುದ್ಧ ಹಿಂದೂ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೆ ಸರಕಾರವೇ ಹೊಣೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article